ಕೋಟ: ಕಡಲ ಕಿನಾರೆಯಲ್ಲಿ ಮೀನುಗಾರಿಕೆ ತೆರಳಿದ್ದ ದೋಣಿ ಮಗುಚಿ ಓರ್ವ ಸಾವು, ಇಬ್ಬರು ಪಾರು
ಕೋಟ: ಪಾರಂಪಳ್ಳಿ ಪಡುಕರೆಯಲ್ಲಿ ಕಡಲ ಕಿನಾರೆಯಲ್ಲಿ ಮೀನುಗಾರಿಕೆ ತೆರಳಿದ ಸಂದರ್ಭದಲ್ಲಿ ದೋಣಿ ಮಗುಚಿ ಓರ್ವ ಸಾವಿಗಿಡಾಗಿ ಇಬ್ಬರು ಪಾರಾದ ಘಟನೆ ಶುಕ್ರಮವಾರ ನಡೆದಿದೆ.
ಸಾವಿಗಿಡಾದ ಮೀನುಗಾರ ಪಾರಂಪಳ್ಳಿ ನಿವಾಸಿ ಸುಮಂತ್ ಮೊಗವೀರ ವ.23 ಎಂದು ಗುರುತಿಸಲಾಗಿದೆ.
ಶುಕ್ರವಾರ ಪೂರ್ವಾಹ್ನ 11.ಗ ಸ್ಥಳೀಯರಾದ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಮೂವರು ಮೀನುಗಾರಿಕೆ ತೆರಳಲು ನಾಡದೋಣಿಯ ಮೂಲಕ ಸಮುದ್ರಕ್ಕೆ ತೆರಳಿದರು ಎನ್ನಲಾಗಿದೆ.
ಸಮುದ್ರದಲ್ಲಿ ಈ ವೇಳೆ ಸಮುದ್ರದ ಬಾರಿ ಗಾತ್ರದ ಅಲೆಗೆ ಸಿಲುಕಿ ದೋಣಿಯಲ್ಲಿದ್ದ ಈ ಮೂವರು ಮುಗುಚಿ ಬಿದ್ದಿದ್ದು, ಇಬ್ಬರು ಸಂದೀಪ್ ಮತ್ತು ಪ್ರಜ್ವಲ್ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ.
ಆದರೆ ಮೃತ ಸುಮಂತ್ ಗೆ ಸಮುದ್ರದ ಬಾರಿ ಗಾತ್ರದ ಅಲೆಗಳ ನಡುವೆ ಈಜಿದರೂ ಪ್ರಯೋಜನ ಬಾರದೆ ಸಮುದ್ರದ ಅಲೆಗಳೊಂದಿಗೆ ಕೊಚ್ಚಿ ಹೋಗಿದ್ದಾರೆ.




