ತಂದೆ ಚಾಲನೆ ಮಾಡುತ್ತಿದ್ದ ವಾಹನಕ್ಕೆ ಸಿಲುಕಿ 1 ವರ್ಷದ ಮಗು ಮೃತ್ಯು
ಬೆಂಗಳೂರು: ಆಟವಾಡುತ್ತಾ ಕುಳಿತಿದ್ದ ಒಂದೂವರೆ ವರ್ಷದ ಮಗಳು ಆಕಸ್ಮಿಕವಾಗಿ ತಂದೆ ಚಾಲನೆ ಮಾಡುತ್ತಿದ್ದ ವಾಹನಕ್ಕೆ ಸಿಲುಕಿ ಬಲಿಯಾಗಿರುವ ಘಟನೆ ಸರ್ಜಾಪುರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ನಡೆದಿದೆ.
ಬಾಲಕೃಷ್ಣ ಎಂಬುವರ ಮಗಳು ಮನಿಶಾ ದೇವಿ ಮೃತ ಬಾಲಕಿ. ಇಚರ್ ವಾಹನ ಚಾಲಕರಾಗಿರುವ ಬಾಲಕೃಷ್ಣ ಅವರು ಮನೆ ಬಳಿ ವಾಹನ ರಿವರ್ಸ್ ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಮನಿಶಾ ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ.




