ಬೆಳ್ಳಾರೆ: ಮಸೂದ್ ಅಂತ್ಯ ಸಂಸ್ಕಾರದಲ್ಲಿ ನೂರಾರು ಮಂದಿ ಬಾಗಿ: ಝಕರಿಯ ಮಸೀದಿ ಖಬರ್ ಸ್ಥಾನದಲ್ಲಿ ನಡೆದ ಧಫನ ಕಾರ್ಯ
ಬೆಳ್ಳಾರೆ: ಕಳಂಜ ಗುಂಪು ಹಲ್ಲೆಗೊಳಗಾಗಿ ಮೃತ ಪಟ್ಟ ಮಸೂದ್ ಮೃತ ದೇಹವನ್ನು ನಿನ್ನೆ ರಾತ್ರಿ 2 ಗಂಟೆಗೆ ಬೆಳ್ಳಾರೆ ಝಕರಿಯ ಜುಮಾ ಮಸೀದಿ ಕಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.


ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರಾತ್ರಿ 11:30ಕ್ಕೆ ಪೋಸ್ಟ್ ಮಾರ್ಟಂ ಆದ ಬಳಿಕ ಮಂಗಳೂರಿನಲ್ಲಿ ಜನಾಝ ಸ್ನಾನ ಮುಗಿಸಿ, ಬೆಳ್ಳಾರೆಗೆ ಆಂಬುಲೆನ್ಸ್ ಮೂಲಕ ಮೃತ ದೇಹವನ್ನು ತರಲಾಯಿತು.
ಮೃತದೇಹ ಬೆಳ್ಳಾರೆಗೆ ತರುವ ವಿಷಯ ತಿಳಿದ ನೂರಾರು ಮಂದಿ ರಾತ್ರಿ 12 ಗಂಟೆ ಸಮಯಕ್ಕೆ ಮಸೀದಿ ಪರಿಸರದಲ್ಲಿ ಜಮಾಯಿಸಲು ತೊಡಗಿದರು. ಸುಮಾರು ಒಂದುವರೆ ಗಂಟೆ ಸಮಯಕ್ಕೆ ಮೃತ ದೇಹ ಬೆಳ್ಳಾರೆಗೆ ತಲುಪಿ ಮಸೀದಿ ಆವರಣದಲ್ಲಿ ಅಂತಿಮ ವಿಧಿ ವಿಧಾನ ಕಾರ್ಯಗಳು ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಮಂದಿ ಮಸೂದ್ ಅಂತ್ಯ ದರ್ಶನ ಪಡೆದುಕೊಂಡರು. ಬಳಿಕ ಮೃತ ದೇಹವನ್ನು ಕಳಂಜ ಮಸೂದ್ ನ ಮನೆಗೆ ಕೊಂಡೊಯ್ದು ಅಲ್ಲಿ ಕುಟುಂಬಸ್ಥರ ಸಂದರ್ಶನದ ಬಳಿಕ ಝಕರಿಯ ಮಸೀದಿ ಕಬರ್ ಸ್ಥಾನಕ್ಕೆ ತಂದು ದಫನ ಕಾರ್ಯ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಮಂದಿ ಭಾಗವಹಿಸಿ ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಪಾಲ್ಗೊಂಡರು.




