ಸುರತ್ಕಲ್: ಟ್ರಕ್ – ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಮೃತ್ಯು
ಮಂಗಳೂರು: ನಗರ ಹೊರವಲಯದ ಸುರತ್ಕಲ್‌ನ ಫ್ಲೈಓವರ್ ಬಳಿ ಗುರುವಾರ ಸಂಜೆ 7.30ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಿನ್ನೆ ಸಂಜೆ ಗೋವಿಂದ ದಾಸ ಕಾಲೇಜು ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ನಡಿಗೆ ಬೈಕ್ ಸಿಲುಕಿ ಸವಾರನ ತಲೆಯ ಮೇಲೆ ಟ್ರಕ್‌ನ ಚಕ್ರ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ಭೀಕರತೆಗೆ ರಸ್ತೆಯಲ್ಲೆಲ್ಲಾ ಸವಾರನ ತಲೆ ಚೆಲ್ಲಾಪಿಲ್ಲಿಯಾಗಿದ್ದು, ರಸ್ತೆಪೂರ್ತಿ ರಕ್ತದೋಕುಳಿ ಹರಿದಿತ್ತು.
ಘಟನೆಯಿಂದ ಸ್ಥಳದಲ್ಲಿ ಹಲವು ಹೊತ್ತು ಟ್ರಾಫಿಕ್ ಜಾಮ್ ಆಗಿದ್ದು, ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಘಟನಾ ಸ್ಥಳದಲ್ಲಿ ಅಪಾರ ಜನರು ಸೇರಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




