March 26, 2026

ಜುಲೈ 23ರಂದು ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ ವತಿಯಿಂದ ಮಸ್ಜಿದ್ ಡೈರಿ ಬಿಡುಗಡೆ

0
image_editor_output_image84524477-1658390845211.jpg

ಬಂಟ್ವಾಳ: ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ ಇದರ ವತಿಯಿಂದ ತಾಲೂಕು ಮಸ್ಜಿದ್ ಡೈರಿ ಬಿಡುಗಡೆ, ಕುರ್ ಆನ್ - ಕಿರಾ ಅತ್ ಸ್ಪರ್ಧೆ, ಮದರಸ - ಶಾಲೆ - ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮವು ನಡೆಯಲಿದೆ.

ಜುಲೈ 23 ರಂದು ಪಾಣೆಮಂಗಳೂರಿನ
ಸಾಗರ್ ಆಡಿಟೋರಿಯಂ ನಲ್ಲಿ ನಡೆಯಲಿರುವುದು. ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದು:ಹಾ ನೆರವೇರಿಸಲಿದ್ದು, ಉಡುಪಿ - ಚಿಕ್ಕಮಂಗಳೂರು ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸುವರು.

ತುಂಬೆ ಗ್ರೂಪ್ ಯು.ಎ.ಇ. ಇದರ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಹಿದಿನ್ ಮಸ್ಜಿದ್ ಡೈರಿ ಬಿಡುಗಡೆ ಗೊಳಿಸಲಿದ್ದು ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸುವರು. ಯೆನಪೋಯ ಡೀಮ್ಡ್ ವಿಶ್ವ ವಿದ್ಯಾಲಯದ ಕುಲಪತಿ ಡಾ. ವೈ ಅಬ್ದುಲ್ಲಾ ಕುಂಞಿ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ, ಉದ್ಯಮಿಗಳಾದ ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಎಸ್. ಮುಹಮ್ಮದ್ ಸಾಗರ್, ನೆಹರು ನಗರ ಖತೀಬ್ ಅಬ್ದುಸ್ಸಲಾಂ ಫೈಝಿ ಇರ್ಫಾನಿ, ಆಲಡ್ಕ ಮುದರ್ರಿಸ್ ಅಶ್ರಫ್ ಸಖಾಫಿ, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್ ಮೊದಲಾದವರು ಭಾಗವಹಿಸಲಿದ್ದಾರೆ ಸಂಯುಕ್ತ ಜಮಾತ್ ಕಮಿಟಿ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!