March 26, 2026

ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘ ಶಾಖೆಯ ಬೀಗ ಮುರಿದು ಕಳ್ಳತನ

0
image_editor_output_image1630424565-1658385335666.jpg

ಬೈಂದೂರು: ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಕರಾವಳಿ ಶಾಖೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಶಾಖೆಯ ಹೊರಗಿನ ಗೇಟ್ ಹಾಗೂ ಶಟರ್ ಒಳಭಾಗವನ್ನು ಮುರಿದು ಒಳನುಗ್ಗಿದ ಕಳ್ಳರು ಕೌಂಟರ್ ಮುಂತಾದ ಹಣಕ್ಕಾಗಿ ಕಡೆ ಹುಡುಕಿದ್ದಾರೆ. ಕಳ್ಳತನವಾದ ಮೌಲ್ಯದ ನಿಖರ ಮಾಹಿತಿ ದೊರೆತಿಲ್ಲ.

ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ತನಿಖೆ ನಡೆಸುತಿದ್ದಾರೆ. ಸ್ಥಳದಲ್ಲಿ ಕಳ್ಳತನಕ್ಕೆ ಬಳಸಿದ ವಸ್ತುಗಳು ಕಂಡುಬಂದಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!