May 11, 2026

ಪುದುಚೇರಿ: ಸ್ಕೂಟರ್‌ನಲ್ಲಿ ತುಂಬಿದ್ದ ಪಟಾಕಿ ಸ್ಫೋಟಗೊಂಡು ತಂದೆ ಮತ್ತು ಮಗ ಮೃತ್ಯು

0
videosss_1200x768.jpeg

ಪುದುಚೇರಿ: ತಂದೆ ಮತ್ತು ಅವನ ಮಗ ಅವರು ಸ್ಕೂಟರ್ ನಲ್ಲಿ ಪಟಾಕಿ ಸ್ಫೋಟಗೊಂಡ ಸಾವನ್ನಪ್ಪಿದ್ದಾರೆ. ಗುರುವಾರ ಪುದುಚರಿ-ವಿಲ್ಲುಪುರಾಮ್ ಗಡಿ ಬಳಿ ಈ ಘಟನೆ ವರದಿಯಾಗಿದೆ.

ತಂದೆ ಕಲೈನೇಸನ್ ಮತ್ತು ಅವರ ಏಳು ವರ್ಷದ ಮಗ ಪ್ರದೀಪ್ ಗುರುವಾರ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಕರಾವಳಿ ರಸ್ತೆಯಲ್ಲಿರುವ ಕೂನಿಮೇಡು ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಇಬ್ಬರು ಪಟಾಕಿಗಳ ಕಟ್ಟುಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಲೈನಾಸನ್ ಸ್ಕೂಟರ್ ಓಡಿಸುತ್ತಿದ್ದಾಗ, ಅವರ ಮಗ ಪ್ರದೀಪ್ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಇರಿಸಲಾದ ಪಟಾಕಿಗಳ ಬಂಡಲ್ ಮೇಲೆ ಕುಳಿತುಕೊಂಡಿದ್ದಾರೆ. ನಂತರ ವೇಗವಾಗಿ ಬಂದ ವಾಹನ ಸ್ಫೋಟಗೊಂಡು ಬಾಲಕ ಮತ್ತು ಆತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ದೃಶ್ಯ ವಿಡಿಯೋದಲ್ಲಿದೆ.

ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪುದುಚೇರಿಯ ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್ಮರ್) ಗೆ ಕರೆದೊಯ್ಯಲಾಯಿತು.

ಒಂದು ಲಾರಿ ಹಾಗೂ ಎರಡು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ. ಘಟನೆ ನಡೆದ ಕೂಡಲೇ ವಿಲ್ಲುಪುರಂ ಜಿಲ್ಲಾ ಡಿಐಜಿ ಪಾಂಡಿಯನ್ ಸ್ಥಳಕ್ಕೆ ಆಗಮಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!