ಶಿವಮೊಗ್ಗ: ಬಜರಂಗದಳ ಸಹ ಸಂಚಾಲಕನ ಮೇಲೆ ಮಾರಣಾಂತಿಕ ದಾಳಿ
ಶಿವಮೊಗ್ಗ: ಬಜರಂಗದಳ ಸಹ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಕಾಂತರಾಜು ಎಂಬಾತನ ಮೇಲೆ ಸೋಮವಾರ ರಾತ್ರಿ ಮಾರಣಾಂತಿಕ ದಾಳಿ ಮಾಡಲಾಗಿದೆ.
ರಾಜೀವ್ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಯುವಕ ಕಾಂತರಾಜು (27) ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.
ಮೂತ್ರ ವಿಸರ್ಜನೆಗೆಂದು ಕಾಂತರಾಜು ಮನೆಯಿಂದ ಹೊರ ಬಂದಾಗ ಮಚ್ಚು ಮತ್ತು ಬ್ಯಾಟ್ ನಿಂದ ದಾಳಿ ನಡೆಸಲಾಗಿದೆ. ಆದರೆ ಕಾಂತರಾಜು ಸಿನಿಮಾ ಶೈಲಿಯಲ್ಲಿ ಅವರ ಆಯುಧಗಳನ್ನೇ ಕಸಿದುಕೊಂಡಿದ್ದಾರೆ. ಸ್ನೇಹಿತರು, ಕುಟುಂಬದವರು ಬಂದೊಡನೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.




