March 26, 2026

ಬಂಟ್ವಾಳ: ನೇತ್ರಾವತಿ ನೀರಿನ ಮಟ್ಟ ಹೆಚ್ಚಳ ಹಿನ್ನೆಲೆ: ಪಾಣೆಮಂಗಳೂರು, ಬಂಟ್ವಾಳದ ಅಂಗಡಿ, ಮನೆಗಳಿಗೆ ನುಗ್ಗಿದ ನೀರು-ಸಂಪೂರ್ಣ ಜಲಾವೃತ

0
image_editor_output_image1176088513-1657436969213

ಬಂಟ್ವಾಳ: ಪಾಣೆಮಂಗಳೂರಿನ ಆಲಡ್ಕ ತಗ್ಗುಪ್ರದೇಶದಲ್ಲಿರುವ ಮನೆ ಹಾಗೂ ಶೆಡ್ ಗಳಿಗೆ ನೀರು ನುಗ್ಗಿದೆ. ಅದೇ ರೀತಿ ಬಂಟ್ವಾಳದ ಹಲವೆಡೆ ನೀರು ನುಗ್ಗಿದೆ.

     
ಪ್ರತಿ ವರ್ಷ ಇಲ್ಲಿ 8.5 ಮೀ ನೀರಿನ ಮಟ್ಟ ಏರಿಕೆಯಾದ ಕೂಡಲೇ ಈ ಮನೆಗಳಿಗೆ ನೀರು ನುಗ್ಗುತ್ತದೆ.
ಇವತ್ತು ಈದ್ ಹಬ್ಬ ವಾದ ಹಿನ್ನೆಲೆಯಲ್ಲಿ ರಾತ್ರಿ ಯೇ ಇಲ್ಲಿನ ಮನೆಗಳ ಸಾಮಾಗ್ರಿಗಳನ್ನು ಖಾಲಿ ಮಾಡಲಾಗಿದೆ.
ಮನೆಮಂದಿಯನ್ನು ಸುರಕ್ಷಿತ ಮನೆಗಳಿಗೆ ಸ್ಥಳಾಂತರ ಮಾಡಲಾಗಿದೆ.

ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರು ನದಿ ತೀರದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನದಿ ತೀರದ ಜನರು ಹೆಚ್ಚು ಜಾಗರೂಕತೆಯಿಂದ ಇರುವಂತೆ ಹಾಗೂ ನೀರು ನುಗ್ಗುವಂತ ಜಾಗದ ಮನೆಯವರನ್ನು ‌ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಕಂದಾಯ ಇಲಾಖೆಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!