August 25, 2026

ಕಾಣಿಯೂರು: ಹೊಳೆಗೆ ಕಾರು ಬಿದ್ದ ಪ್ರಕರಣ: ಕಾರ್ಯಾಚರಣೆಗೆ ಬಂದ ಕ್ರೇನ್ ಹೊಂಡಕ್ಕೆ

0
IMG-20220710-WA0122

ಪುತ್ತೂರು: ನಿಯಂತ್ರಣ ತಪ್ಪಿ ಕ್ರೇನ್ ಹೊಂಡಕ್ಕೆ ಬಿದ್ದ ಘಟನೆ ಬೆದ್ರಾಳ ಸಮೀಪ ನಡೆದಿದೆ.

ಕಾಣಿಯೂರು ಬೈತಡ್ಕ ಹೊಳೆಗೆ ಕಾರು ಬಿದ್ದ ಹಿನ್ನೆಲೆ ಕಾರ್ಯಾಚರಣೆ ನಡೆಸಲು ತೆರಳುತ್ತಿದ್ದ ಕ್ರೇನ್ ಬೆದ್ರಳಾ ಸಮೀಪ ಹೊಂಡಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ.

ವಾಹನವೊಂದಕ್ಕೆ ಸೈಡ್ ಕೊಡಲು ಹೋದ ವೇಳೆ ರಸ್ತೆ ಬದಿಯಲ್ಲಿ ಮಳೆಯಿಂದಾಗಿ ಮಣ್ಣು ಮೃದುವಾಗಿದ್ದ ಹಿನ್ನೆಲೆ ಕ್ರೇನ್ ನ ಒಂದು ಬದಿಯ ಚಕ್ರ ಮಣ್ಣಲ್ಲಿ ಹೂತು ಹೋಗಿದೆ. ಕ್ರೇನ್ ಚಾಲಕನಿಗೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.

ಕಾಣಿಯೂರು: ಹೊಳೆಗೆ  ಬಿದ್ದ ಕಾರು ಪತ್ತೆ: ಮೇಲಕ್ಕೆತ್ತುವಾಗ ಮತ್ತೆ ನೀರು ಪಾಲು
ಕಾಣಿಯೂರು: ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ಜು.9 ರಂದು ರಾತ್ರಿ ಕಾಣಿಯೂರು ಬೈತಡ್ಕದಲ್ಲಿ ನಡೆದಿದ್ದು, ನೀರುಪಾಲಾಗಿರುವ ಕಾರು ಪತ್ತೆಯಾಗಿದ್ದು, ಆದರೇ ಮೇಲಕ್ಕೆತ್ತಲು ಪ್ರಯತ್ನಿಸಿದಾಗ ನೀರಿನ ರಭಸಕ್ಕೆ ಮುಂದೆ ಕೊಚ್ಚಿ ಹೋಗಿದೆ ಎಂದು ತಿಳಿದು ಬಂದಿದೆ.

ಇದೀಗ ಮತ್ತೆ ಕಾರನ್ನು ಹುಡುಕಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಭೇಟಿ ನೀಡಿದ್ದು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾವಣೆಗೊಂಡಿದ್ದಾರೆ.

ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಕಾರು ಸೇತುವೆಯ ತಡೆ ಬೆಲಿಗೆ ಡಿಕ್ಕಿ ಹೊಡೆದು ಹೊಳೆಗೆ ಬೀಳುವ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ
ಸೆರೆಯಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!