August 25, 2026

ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ:
ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಮುಂತಾದೆಡೆ ಭೂ ಕಂಪನ

0
image_editor_output_image1284218558-1657428257594

ಸುಳ್ಯ : ಸುಳ್ಯ, ಕೊಡಗು ಗಡಿಭಾಗದಲ್ಲಿ ಜುಲೈ10ರ ಭಾನುವಾರವೂ ಭೂಕಂಪನದ ಅನುಭವವಾಗಿದ್ದು, ಇದು ಎಂಟನೇ ಭಾರಿ ಭೂಮಿ ಕಂಪಿಸುತ್ತಿರುವುದಾಗಿದೆ.

ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ. ಮುಂಜಾನೆ 6.24ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಮಲಗಿದ್ದ ವೇಳೆ ಭೂಮಿ ಅಲುಗಾಡಿದೆ ಎಂದು ಜನ ತಿಳಿಸಿದ್ದಾರೆ. ಇಂದು ಸಂಭವಿಸಿದ ಭೂಕಂಪದ ಕೇಂದ್ರ ಅರಂತೋಡು ಎಂಬುದಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.


ಕಲ್ಲುಗುಂಡಿ ಮಠದ ಮೂಲೆ ಬಳಿಯ ನಿವಾಸಿ ತಾಜುದ್ದೀನ್ ಟರ್ಲಿ ಅವರ ಮನೆ ಹಿಂಬದಿ ಭೂಮಿ ಭೂಕಂಪನದ ವೇಳೆ ಬಿರುಕು ಬಿಟ್ಟಿದೆ. ಅಲ್ಲದೆ ಹಿಂಬದಿಯ ಬರೆ ಕುಸಿದು ಬಿದ್ದಿದೆ. ಇದರಿಂದ ಮನೆ ಮೇಲೆ ಬರೆ ಕುಸಿಯುವ ಆತಂಕ ಎದುರಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!