ದಿಲ್ಲಿ ಸರಕಾರ ಪಟಾಕಿ ನಿಷೇಧ ಹೇರಿದ್ದರೂ ಅಪಾಯಕಾರಿ ಹಂತಕ್ಕೆ ತಲುಪಿದ ಗಾಳಿಯ ಗುಣಮಟ್ಟ:
ಹಲವರಿಗೆ ಗಂಟಲಿನಲ್ಲಿ ತುರಿಕೆ
ಹೊಸದಿಲ್ಲಿ: ದೀಪಾವಳಿ ವೇಳೆ ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟವು ಅಪಾಯಕಾರಿ ಹಂತಕ್ಕೆ ತಲುಪಿದೆ.
ದೆಹಲಿ ಸರಕಾರ ಪಟಾಕಿ ನಿಷೇಧ ಹೇರಿದ ಹೊರತಾಗಿಯೂ, ಹಲವಾರು ಜನರು ದೀಪಾವಳಿಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸಿದ್ದಾರೆ. ಇದು ಗಾಳಿಯ ಗುಣಮಟ್ಟ ಹದಗೆಡಲು ಕಾರಣವಾಗಿದೆ. ಇನ್ನೊಂದೆಡೆ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹೆಚ್ಚಿರುವುದು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.
ಜನಪಥ್‌ನಲ್ಲಿ ಇಂದು ಬೆಳಿಗ್ಗೆ ಮಾಲಿನ್ಯ ಮಾಪಕ 2.5 ಸಾಂದ್ರತೆಯು 655.07 ರಷ್ಟಿತ್ತು. ದೆಹಲಿಯ ಆಕಾಶವನ್ನು ದಟ್ಟವಾದ ಹೊಗೆಯ ಹೊದಿಕೆಯು ಆವರಿಸಿದೆ, ಹಲವರು ಗಂಟಲಿನ ತುರಿಕೆ ಮತ್ತು ಕಣ್ಣಿನಲ್ಲಿ ನೀರು ತುಂಬಿಕೊಂಡಿದೆ ಎಂದು ದೂರಿದ್ದಾರೆ.




