ಮಳೆ ಅಬ್ಬರ: ವಿಟ್ಲ-ಸಾಲೆತ್ತೂರು ರಸ್ತೆ ಬ್ಲಾಕ್
ವಿಟ್ಲ: ಬೆಳಿಗ್ಗೆನಿಂದಲೇ ಸುರಿಯುತ್ತಿರುವ ಮಳೆಯಿಂದಾಗಿ ಕುಡ್ತಮುಗೇರು ಹೊಳೆ ತುಂಬಿ ಹರಿಯುತ್ತಿದ್ದ ಕಾರಣ ನೆರೆ ನೀರು ರಸ್ತೆಗೆ ನುಗ್ಗಿದ ಪರಿಣಾಮ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿದೆ.
ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರು ಹೊಳೆ ಬಳಿಯಿಂದ ಹಾದು ಹೋಗುವ ವಿಟ್ಲ, ಸಾಲೆತ್ತೂರು, ಮಂಗಳೂರು ಸಂಪರ್ಕ ಹೆದ್ದಾರಿ ತಗ್ಗು ಪ್ರದೇಶ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. ಮಧ್ಯಾಹ್ನ ವೇಳೆ ವಾಹನ ಸಂಚಾರ ಮುಂದುವರಿದಿದೆ.