ರೈಲ್ವೆಹಳಿಯ ಪಕ್ಕದಲ್ಲಿದ್ದ ಟ್ರಕ್ ನಲ್ಲಿ 46 ವಲಸಿಗರ ಮೃತದೇಹ ಪತ್ತೆ: ಮೂವರ ಬಂಧನ
ಟೆಕ್ಸಾಸ್: ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಟ್ರಕ್ ನಲ್ಲಿ 46 ವಲಸಿಗರು ಸತ್ತಿರುವುದನ್ನು ಪತ್ತೆಯಾಗಿದೆ ಎಂದು ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಇದು ಯುಎಸ್-ಮೆಕ್ಸಿಕೊ ಗಡಿಯಲ್ಲಿ ಮಾನವ ಕಳ್ಳಸಾಗಣೆಯಿಂದ ಪರಿಣಾಮದಿಂದಾಗಿ ಎನ್ನಲಾಗಿದೆ.
ಸ್ಯಾನ್ ಆಂಟೋನಿಯೊ ಅಗ್ನಿಶಾಮಕ ಇಲಾಖೆಯು ಟ್ರಕ್ ನಲ್ಲಿ ಕಂಡುಬಂದ ನಾಲ್ವರು ಅಪ್ರಾಪ್ತರು ಸೇರಿದಂತೆ ಇತರ 16 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದರು. ಘಟನೆಯ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ದಕ್ಷಿಣ ಹೊರವಲಯದಲ್ಲಿರುವ ದೂರದ ಪ್ರದೇಶದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಟ್ರಕ್ ಪತ್ತೆಯಾಗಿದೆ.





