March 18, 2026

ಅಗ್ನಿಪಥ್ ಯೋಜನೆ: ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭ

0
image_editor_output_image674599661-1656050823576.jpg

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯ ಮೊದಲ ಬ್ಯಾಚ್‌ ನ ಅಗ್ನಿವೀರರ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

ಅಭ್ಯರ್ಥಿಗಳು agnipathvayu.cdac.in ಅಧಿಕೃತ ವೆಬ್‌‌ಸೈಟ್‌ ನಲ್ಲಿ ಆನ್‌ಲೈನ್‌ನಲ್ಲಿ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.

ಆನ್‌ ಲೈನ್ ನೋಂದಣಿ ಬೆಳಿಗ್ಗೆ 10 ರಿಂದ ಪ್ರಾರಂಭವಾಗಲಿದ್ದು, ಪ್ರವೇಶದ ಪ್ರಕ್ರಿಯೆ, ಪ್ರವೇಶ ಮಟ್ಟದ ಅರ್ಹತೆ ಮತ್ತು ಪರೀಕ್ಷೆಯ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ವಾಯುಪಡೆಯ ಎಲ್ಲಾ ದಾಖಲಾತಿಗಳು ಅಗ್ನಿವೀರ್ ವಾಯು ಮೂಲಕ ಮಾತ್ರ ನಡೆಯುತ್ತವೆ.

ಇನ್ನು ಆನ್‌ಲೈನ್ ಪರೀಕ್ಷೆಯನ್ನು ಜುಲೈ 24 ರಿಂದ ಜುಲೈ 31 ರವರೆಗೆ ದೇಶಾದ್ಯಂತ 250 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ವರ್ಷದ ಅಂತ್ಯದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮುಂದಿನ ತಿಂಗಳ 1 ರಿಂದ ಸೇನೆ ಮತ್ತು ನೌಕಾಪಡೆ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

error: Content is protected !!