ಬಾಡಿಗೆ ತಾಯಿಗೆ ಆರೋಗ್ಯ ವಿಮೆ ಕಡ್ಡಾಯ: ಸುತ್ತೋಲೆ ಬಿಡುಗಡೆ ಮಾಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವವರು ಆಕೆಗೆಕಡ್ಡಾಯವಾಗಿ 3 ವರ್ಷಗಳ ಆರೋಗ್ಯ ವಿಮೆ ಮಾಡಿಸಲೇಬೇಕು. ಇತ್ತೀಚೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾ ಲಯ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ.
ಬಾಡಿಗೆ ತಾಯಿ ಗರ್ಭಿಣಿಯಾದಾಗ ಮತ್ತು ಹೆರಿಗೆಯ ಬಳಿಕ ಯಾವುದೇ ಪ್ರತಿಕೂಲಗಳನ್ನು ಎದುರಿಸಲು ಬೇಕಾಗುವ ವಿತ್ತೀಯ ನೆರವು ನೀಡುವಷ್ಟು ವಿಮೆ ಇರಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಅದಕ್ಕಾಗಿ ಮಾನ್ಯತೆ ಪಡೆದಿರುವ ಆರೋಗ್ಯ ವಿಮೆ ಕಂಪೆನಿಯಿಂದ ವಿಮೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ಮಕ್ಕಳನ್ನು ಪಡೆಯಲು ಇಚ್ಛಿಸುವ ದಂಪತಿ ಕೋರ್ಟ್‌ಗೆ ಅಫಿದಾವಿತ್ ಸಲ್ಲಿಸಬೇಕು. ಬಾಡಿಗೆ ತಾಯಿಗೆ ಒಂದು ಬಾರಿ ಒಂದು ಭ್ರೂಣವನ್ನು ಮಾತ್ರ ಪ್ರಸೂತಿ ರೋಗ ತಜ್ಞರು ವರ್ಗಾಯಿಸಬಹುದು. ವಿಶೇಷ ಪ್ರಕರಣಗಳಲ್ಲಿ ಮಾತ್ರ 3 ಭ್ರೂಣಗಳವರೆಗೆ ವರ್ಗಾಯಿಸಬಹುದು ಎಂದು ಸೂಚಿಸಲಾಗಿದೆ.