ಬಂಟ್ವಾಳ: ವೃದ್ಧೆಯ ಸರ ಕಳವು ಪ್ರಕರಣ: ಆರೋಪಿಯ ಬಂಧನ
ಬಂಟ್ವಾಳ: ಕಾವಳಪಡೂರು ಹ೦ಚಿಕಟ್ಟೆ ಎಂಬಲ್ಲಿ ಜೂನ್ 15ರ೦ದು ನಡೆದುಕೊಂಡು ಹೋಗುತ್ತಿದ್ದ ವೃದ್ದೆಯ ಸರವನ್ನು ಸೆಳೆದೊಯ್ದ ಆರೋಪಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಟಿ.ಡಿ.ನಾಗರಾಜ್, ಪಿಎಸ್ಸೈ ಹರೀಶ್ ಅವರ ತಂಡ ಬಂಧಿಸಿದೆ.
ಬಂಧಿತನನ್ನು ತಣ್ಣೀರುಪ೦ಥ ನಿವಾಸಿ ಇಲ್ಯಾಸ್ (26) ಎಂದು ಗುರುತಿಸಲಾಗಿದೆ.
ಬುಧವಾರದಂದು ಮಧ್ಯಾಹ್ನ 4.15 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬ೦ಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಹ೦ಚಿಕಟ್ಟೆ ಸಾಲುಮರದ ತಿಮ್ಮಕ್ಕ ರಸ್ತೆಯ ಹತ್ತಿರ ರಸ್ತೆ ಬದಿ ನಡೆದುಕೊ೦ಡು ಹೋಗುತ್ತಿದ್ದ ಪೂವಮ್ಮ (69) ಎ೦ಬವರ ಕುತ್ತಿಗೆಯಲ್ಲಿದ್ದ ಚಿನ್ನ ಲೇಪಿತ ಬೆಳ್ಳಿಯ ಸರವನ್ನು ಮೋಟರ್ ಬೈಕ್ ನಲ್ಲಿ ಬಂದ ಅಪರಿಚಿತ ಸುಲಿಗೆ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.




