February 3, 2026

ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ:
ಕಬಕ ಮತ್ತು ಪುತ್ತೂರು ನಿವಾಸಿಗಳಿಬ್ಬರ ಬಂಧನ

0
IMG-20220617-WA0002.jpg

ಬಂಟ್ವಾಳ: ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಕೈಯಲ್ಲಿರಸಿಕೊಂಡು ತಿರುಗುತ್ತಿದ್ದ ಇಬ್ಬರು ಆರೋಪಿ ಗಳನ್ನು ಬಂಟ್ವಾಳ ಎ.ಎಸ್.ಪಿ.ನೇತ್ರತ್ವದ ತಂಡ ಮೆಲ್ಕಾರ್ ನಲ್ಲಿ ವಶಕ್ಕೆ ಪಡೆದುಕೊಂಡಿದೆ.

ಕಬಕ ಸಮೀಪದ ಪರನೀರು ಕಟ್ಟೆ ಮನೆ ನಿವಾಸಿ ಮಹಮ್ಮದ್ ರಫೀಕ್, ಹಾಗೂ ಪುತ್ತೂರು ಕೆಮ್ಮಿಂಜ ಗ್ರಾಮದ ಮುಕ್ರಂಪಾಡಿ ನಿವಾಸಿ ತಾರಾನಾಥ ಪೂಜಾರಿ ಬಂಧಿತ ಆರೋಪಿಗಳು. ಬಂಧಿತರಿಂದ 7.500 ಮೌಲ್ಯದ 355 ಗ್ರಾಂ ಗಾಂಜಾ ವನ್ನು ಪೋಲೀಸರು ವಶಕ್ಕೆ ಪಡೆದುಕೊಂಡರು.

ಆರೋಪಿಗಳು ಮೆಲ್ಕಾರ್ ಸಮೀಪದ ನರಹರಿ ಪರ್ವತದ ಸಮೀಪದಲ್ಲಿ ಪೋಲೀಸರನ್ನು ನೋಡಿ ಓಡಿ ಹೋಗಲು ಯತ್ನಿಸಿದ ವೇಳೆ ಸಂಶಯಗೊಂಡ ಪೋಲೀಸರು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಅತನ ಬಳಿ ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದ ಗಾಂಜಾ ಪತ್ತೆಯಾಗಿದೆ.

ಎಸ್.ಪಿ.ಶಿವಾಂಶು ರಜಪೂತ ಅವರ ನಿರ್ದೇಶನದಂತೆ ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಮಾರ್ಗದರ್ಶನ ದಲ್ಲಿ ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಅವರ ನೇತ್ರತ್ವದ ಲ್ಲಿ ಎ‌ಎಸ್.ಐ.ಶಿವರಾಮ ನಾಯ್ಕ್, ಸಿಬ್ಬಂದಿ ಗಳಾದ ಉದಯ ರೈ, ಕುಮಾರ್, ನಾಗರಾಜ್, ಇರ್ಶಾದ್, ಮೋಹನ್ ಕಾರ್ಯಚರಣೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!