ಜಾತಕದಲ್ಲಿ ದೋಷ: ಮದುವೆ ನಿರಾಕರಿಸಿದ ಪ್ರಿಯಕರ:
ಮಹಿಳಾ ಕಾನ್ಸ್ ಟೇಬಲ್ ವಿಷ ಸೇವಿಸಿ ಆತ್ಮಹತ್ಯೆ
ಶಿವಮೊಗ್ಗ: ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು, ಮದುವೆ ಮಾಡಿಕೊಳ್ಳೋದಕ್ಕಾಗಿ ಜಾತಕ ತೋರಿಸಿದ ಸಂದರ್ಭದಲ್ಲಿ ಹುಡುಗಿಗೆ ಕುಜ ದೋಷವಿದೆ ಎನ್ನುವ ಕಾರಣಕ್ಕೆ, ಮದುವೆ ಆಗೋದಕ್ಕೆ ಪ್ರಿಯಕರ ನಿರಾಕರಿಸಿದ್ದು, ಇದರಿಂದ ಮನನೊಂದ ಮಹಿಳಾ ಕಾನ್ಸ್ ಟೇಬಲ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಸುಧಾ ಎಂಬುವರು ಸೇವೆ ಸಲ್ಲಿಸುತ್ತಿದ್ದು, ಸುಧಾ ಹಾಗೂ ಅರಣ್ಯ ಇಲಾಖೆಯ ಆರ್ ಎಫ್‌ಓ ಆಗಿ ಸೇವೆ ಸಲ್ಲಿಸುತ್ತಿರೋ ಪ್ರವೀಣ್ ಮೊಕಾಶಿ, ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇನ್ನು ಯುವತಿಯ ಜಾತಕವನ್ನು ಮನೆಯವರಿಗೆ ಹುಡುಗ ನೀಡಿದ್ದು, ಯುವತಿಯ ಜಾತಕದಲ್ಲಿ ಕುಜದೋಷವಿದೆ ಎನ್ನುವ ಕಾರಣಕ್ಕೆ ಪ್ರವೀಣ್ ಮೊಕಾಶಿ ತಾಯಿ ಮದುವೆಗೆ ನಿರಾಕರಿಸಿದ್ದಾಳೆ. ಮನೆಯವರು ಸುಧಾ ಮದುವೆಗೆ ಒಪ್ಪದ ಕಾರಣ, ಪ್ರವೀಣ್ ಕೂಡ ಸುಧಾಳಿಂದ ದೂರವಾಗಿದ್ದಾನೆ.




