February 2, 2026

ನಾಲ್ಕು ಹಳ್ಳಿಗಳಲ್ಲಿ ಗುಂಡಿನ ದಾಳಿ:
7 ಮಂದಿ ಸಾವು, ಇಬ್ಬರು ಗಂಭೀರ

0
Screenshot_2022-06-17-10-53-52-01_680d03679600f7af0b4c700c6b270fe7.jpg

ಕ್ಯಾಮರೂನ್: ಬಂದೂಕುಧಾರಿಯೊಬ್ಬ ಈಶಾನ್ಯ ಕ್ಯಾಮರೂನ್‌ನ ನಾಲ್ಕು ಹಳ್ಳಿಗಳಲ್ಲಿ ನಡೆಸಿದ ಗುಂಡಿನ ದಾಳಿ ವೇಳೆ 7 ಮಂದಿ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಎಕೆ–47 ಮಾದರಿಯ ಶಸ್ತ್ರ ಮತ್ತು ನಾಲ್ಕು ಮ್ಯಾಗಜಿನ್‌ಗಳನ್ನು ಹೊಂದಿದ್ದ ಬಂದೂಕುಧಾರಿ, ನಾಲ್ಕು ಗ್ರಾಮಗಳಲ್ಲಿ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಕ್ಯಾಮರೂನ್‌ನ ಅಡಮಾವದ ಈಶಾನ್ಯ ಭಾಗದ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸೋಮವಾರ ಗುಂಡಿನ ದಾಳಿ ನಡೆದಿದೆ. 7 ಮಂದಿ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಸ್ಥಳೀಯ ಟಿವಿ ವಾಹಿನಿ ಕ್ಯಾಮರೂನ್‌ ರೇಡಿಯೊ ಟೆಲಿವಿಷನ್‌ (ಸಿಆರ್‌ಟಿವಿ) ಖಚಿತಪಡಿಸಿದೆ.

ದಾಳಿ ವೇಳೆ ನಾಲ್ಕು ಮಂದಿ ಸ್ಥಳದಲ್ಲೇ ಸಾವನಪ್ಪಿದ್ದು, ಉಳಿದ ಮೂವರು ಆಸ್ಪತ್ರೆಗೆ ಕರೆದೊಯ್ಯವಾಗ ಕೊನೆಯುಸಿರೆಳದಿದ್ದಾರೆ. ಸದ್ಯ ದಾಳಿಕೋರ ಪರಾರಿಯಾಗಿದ್ದಾನೆ. ದಾಳಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸಿಆರ್‌ಟಿವಿ ವರದಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!