ಉಳ್ಳಾಲ: ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ಉಳ್ಳಾಲ: ಕಾಲೇಜು ವಿದ್ಯಾರ್ಥಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲ ಎಂಬಲ್ಲಿ ನಡೆದಿದೆ.
ಬಗಂಬಿಲ ನಿವಾಸಿ, ಮಂಗಳೂರು ಶ್ರೀ ದೇವಿ ಕಾಲೇಜಿನ ಕಾಲೇಜಿನ ದ್ವಿತೀಯ ಬಿಬಿಎ ವಿದ್ಯಾರ್ಥಿ ಹರ್ದೀಪ್ (೨೦) ಮೃತ ವಿದ್ಯಾರ್ಥಿ.
ಮನೆಯಲ್ಲಿರುವ ಆರ್ಥಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




