February 2, 2026

ಪಣಂಬೂರು ರೌಡಿಶೀಟರ್ ರಾಘವೇಂದ್ರ ಕೊಲೆ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

0
image_editor_output_image-516042865-1655097990320.jpg

ಮಂಗಳೂರು: ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ.6ರಂದು ನಡೆದ ರೌಡಿಶೀಟರ್ ರಾಘವೇಂದ್ರ ಕೊಲೆ ಪ್ರಕರಣದ ಆರೋಪಿಗಳು ಮತ್ತು ಸಹಕಾರ ನೀಡಿದವರು ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಇಡ್ಯಾ ನಿವಾಸಿ ಸಂದೀಪ್ (45), ಕೃಷ್ಣಾಪುರದ ಸಂದೀಪ್ ದೇವಾಡಿಗ ಯಾನೆ ಸ್ಯಾಂಡಿ (32), ಸುರತ್ಕಲ್ ತಡಂಬೈಲ್ ನಿವಾಸಿ ಲಿಖಿತ್ (31), ತೋಟಬೆಂಗ್ರೆಯ ದೀಕ್ಷಿತ್ ಯಾನೆ ಕಕ್ಕೆ ದೀಕ್ಷಿತ್ (23 ) ಮೀನಕಳಿಯ ನಿವಾಸಿ ತುಷರ್ ಅಮೀನ್ ( 30), ಪಂಜಿಮೊಗರಿನ ವಿನೋದ್ ಕುಮಾರ್ (32) ಬೈಕಂಪಾಡಿಯ ಲತೇಶ್ ಜೋಗಿ (27), ಬೈಕಂಪಾಡಿಯ ಸಂದೀಪ್ ಪುತ್ರನ್ (36), ಮೂಡುಶೆಡ್ಡೆಯ ಅಕ್ಷಿತಾ ( 28) ಬಂಧಿತರು.

ಆರೋಪಿಗಳನ್ನು ರವಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿಗಳು ರಾಘವೇಂದ್ರ ಹತ್ಯೆಗೆ ಸಹಕರಿಸಿರುವ, ಸಂಚು ರೂಪಿಸಿರುವ, ಹಣಕಾಸಿನ ನೆರವು ನೀಡಿರುವ, ಕೊಲೆ ಕೃತ್ಯ ನಡೆಸಿದ ಬಳಿಕ ತಪ್ಪಿಸಿಕೊಳ್ಳಲು ಆಶ್ರಯ ನೀಡಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!