ಕುಳೂರು: ಮೊಬೈಲ್ ಅಂಗಡಿಯ ಮಾಲಕರೊಬ್ಬರು ಆತ್ಮಹತ್ಯೆ
ಮಂಗಳೂರು: ಮೊಬೈಲ್ ಅಂಗಡಿಯ ಮಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುಳೂರಿನಲ್ಲಿ ಭಾನುವಾರ ರಾತ್ರಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಕುಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಚೊಕ್ಕಬೆಟ್ಟು ನಿವಾಸಿ ಸೊಹೈಲ್ (34) ಎಂದು ಗುರುತಿಸಲಾಗಿದೆ.
ಸೊಹೈಲ್ ಅವರು ತನ್ನ ಮೊಬೈಲ್ ಅಂಗಡಿಯ ಹಿಂದಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.




