March 28, 2026

ವಾಹನಗಳ ಎಂಜಿನ್ ಆಯಿಲ್ ಕುಡಿದು ಬದುಕುತ್ತಿರುವ ಅಯ್ಯಪ್ಪ ಭಕ್ತ: ವೀಡಿಯೋ ವೈರಲ್

0
IMG-20220609-WA0049.jpg

ಶಿವಮೊಗ್ಗ: ಅಯ್ಯಪ್ಪ ಭಕ್ತನೊಬ್ಬ ವಾಹನಗಳಿಂದ ತೆಗೆದ ಇಂಜಿನ್ ಆಯಿಲ್ ಕುಡಿದು ಬದುಕುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲಾಗ್ತಿದೆ.

ಅನ್ನ ತಿಂದವನೇ ಈಗಿನ ಕಾಲದಲ್ಲಿ ಬದುಕಲ್ಲ. ಇಂಜಿನ್ ಆಯಿಲ್(ಮಡ್ ಆಯಿಲ್) ಕುಡಿದವನೂ ಬದುಕ್ತಾನ ಅಂತ ಹುಬ್ಬೆರಿಸ್ಬೇಡಿ. ವಿಚಿತ್ರವಾದರೂ ಸತ್ಯ! ಶಿವಮೊಗ್ಗ ಮೂಲದ ಕುಮಾರ(42) ಎಂದು ಪರಿಚಯಿಸುವ ಈತ ತನ್ನ ಹದಿನೇಳನೇ ವಯಸ್ಸಿನಿಂದ ಹಳೆಯ ಇಂಜಿನ್ ಆಯಿಲ್ ಕುಡಿಯುತ್ತಿದ್ದಾನಂತೆ.

ಹಲವಾರು ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರೂ ಈತನ ಆಯಿಲ್ ಕುಡಿಯೋ ಚಟ ಬಿಟ್ಟಿಲ್ಲವೆಂದು ಈತನೇ ಹೇಳುತ್ತಿದ್ದಾನೆ. ಕಳೆದ ಇಪ್ಪತೈದು ವರ್ಷಗಳಿಂದ ಅನ್ನ-ಆಹಾರ ಸೇವಿಸದ ಈತ ಪ್ರತಿನಿತ್ಯ ನಾಲ್ಕು ಲೀಟರ್ ಮಡ್ ಆಯಿಲ್, ದಿನಪತ್ರಿಕೆಗಳು ಮತ್ತು ಒಂದು ಲೋಟ ಚಹಾ ಅಥವಾ ಕಾಫಿ ಮಾತ್ರ ಆಯಿಲ್ ಕುಮಾರನ ಆಹಾರವೆಂದು ಈತನೇ ಹೇಳುತ್ತಿದ್ದಾನೆ.
ಅಯ್ಯಪ್ಪ ಭಕ್ತನಾಗಿರುವ ಆಯಿಲ್ ಕುಮಾರನಿಗೆ ಮನೆ, ಸಂಬಂಧಿಕರು ಯಾರೂ ಇಲ್ಲವೆಂದು ಹೇಳುತ್ತಿದ್ದು, ಅಯ್ಯಪ್ಪ ಮಂದಿರಗಳೇ ನನ್ನ ವಾಸಸ್ಥಾನವೆಂದು ಸ್ಪಷ್ಟಪಡಿಸುತ್ತಾನೆ.

Leave a Reply

Your email address will not be published. Required fields are marked *

error: Content is protected !!