ಬಂಟ್ವಾಳ: ಪಿಎಫ್ಐ ಬ್ಯಾಂಕ್ ಖಾತೆಗಳ ತಾತ್ಕಾಲಿಕ ಮುಟ್ಟುಗೋಲು: ಈಡಿ ಕ್ರಮದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿಭಟನೆ
ಬಂಟ್ವಾಳ: ಬ್ಯಾಂಕ್ ಖಾತೆಗಳ ತಾತ್ಕಾಲಿಕ ಮುಟ್ಟುಗೋಲು ಹಾಕಿದ ಈಡಿ ಕ್ರಮದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ವತಿಯಿಂದ ಬಿ.ಸಿ.ರೋಡ್ ಕೈಕಂಬದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷರಾದ ಸಲೀಂ ಕುಂಪನಮಜಲು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯುಬ್ ಅಗ್ನಾಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ಇಮ್ತಿಯಾಜ್ ತುಂಬೆ ಆಗಮಿಸಿದ್ದರು.



ಅಯ್ಯುಬ್ ಅಗ್ನಾಡಿ ಮಾತನಾಡಿ ನಮ್ಮ ಸಿಗಬೇಕಾದ ಹಕ್ಕುಗಳನ್ನು ಯಾವ , ಈಡಿ ಅಥವಾ ಯಾವುದೇ ಪೊಲೀಸ್ ಫೋರ್ಸ್ ಬಂದರೂ ನಾವು ಕಾನೂನಾತ್ಮಕವಾಗಿ ಹೋರಾಡಿ ಪಡೆದೇ ಪಡೆಯುವುತ್ತೇವೆ ಎಂದರು.
ಇಮ್ತಿಯಾಜ್ ತುಂಬೆ ಮಾತನಾಡಿ ಒಂದಂತು ಸ್ಪಷ್ಟ ಸಂಘಪರಿವಾರ ಅಥವಾ ಇಲ್ಲಿನ ಫ್ಯಾಸಿಸ್ಟ್ ಪೊಲೀಸರು ಅಥವಾ ಇಲ್ಲಿನ ಫ್ಯಾಸಿಸ್ಟ್ ಈಡಿ ಇಲಾಖೆಯವರತ್ತರ ನಮಗೆ ಹೇಳಲಿಕ್ಕೆ ಇರುವುದು ನಮ್ಮ ಒಂದು ಕೂದಲನ್ನು ನಿಮ್ಮಿಂದ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಲೀಂ ಕುಂಪನಮಜಲು ನಮಗೆ ಹೇಳಲಿಕ್ಕೆ ಇರುವುದು ನಾವು ಈಗ ಸಾಂಕೇತಿಕ ಪ್ರತಿಭಟನೆ ಮಾತ್ರ ಮಾಡುತ್ತಾ ಇದ್ದೇವೆ ಮುಂದಿನ ದಿನಗಳಲ್ಲಿ ಇಂಥ ಒಂದು ಕ್ರಾಂತಿಯುತ ಹೋರಾಟವಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಈಡಿ ಮತ್ತು ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.




