March 26, 2026

ಸರಣಿ ರಸ್ತೆ ಅಪಘಾತ: ಕಾರಿನಲ್ಲಿದ್ದ ಇಬ್ಬರು ಮೃತ್ಯು, 11 ಮಂದಿ ಗಾಯ

0
image_editor_output_image540371151-1654323315142.jpg

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು, ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಎದುರುಗಡೆ ಬರುತ್ತಿದ್ದ ಟಿಟಿ ಮತ್ತು ಬುಲೆಟ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, 11 ಮಂದಿ ಗಾಯಗೊಂಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಬೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಮೃತರ ಪೈಕಿ ಒಬ್ಬರನ್ನು ಬೆಂಗಳೂರಿನ ಸುನೀಲ್ ಎಂದು ಗುರುತಿಸಲಾಗಿದೆ, ಮತ್ತೊಬ್ಬರ ವಿಳಾಸ ಪತ್ತೆಯಾಗಿಲ್ಲ, ಟಿಟಿಯಲ್ಲಿದ್ದ ನಾಗಮಂಗಲ ತಾಲ್ಲೂಕಿನ ರಾಮೇಗೌಡ ಕುಟುಂಬಕ್ಕೆ ಸೇರಿದ 8 ಹಾಗೂ ಬುಲೆಟ್‌ನಲ್ಲಿ ಇದ್ದ ಇಬ್ಬರು ಗಾಯಗೊಂಡಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!