ದೇವಸ್ಥಾನದಲ್ಲಿ ಕ್ಷಮಾ ಬಿಂದು ಸ್ವಯಂ ಮದುವೆಗೆ ಬಿಜೆಪಿ ವಿರೋಧ
ವಡೋದರಾ: ಸ್ವಯಂ ವಿವಾಹ ಮಾಡಿಕೊಳ್ಳುವುದಾಗಿ ಘೋಷಿಸಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್ ನ ಕ್ಷಮಾ ಬಿಂದು ಮದುವೆಗೆ ಇದೀಗ ಅಡ್ಡಿ ಎದುರಾಗಿದೆ.
ವಡೋದರಾದ ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ ಅವರು ಕ್ಷಮಾ ಬಿಂದು ತನ್ನನ್ನು ಮದುವೆಯಾಗುವ ನಿರ್ಧಾರಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಎಎನ್ ಐ ಗೆ ಮಾತನಾಡಿದ ಸುನೀತಾ ಶುಕ್ಲಾ, “ಒಂದು ವೇಳೆ ಕ್ಷಮಾ ಬಿಂದು ದೇವಸ್ಥಾನದಲ್ಲಿ ಮದುವೆಯಾಗುತ್ತಿದ್ದರೆ, ನಾವು ಅವಳನ್ನು ಹಾಗೆ ಮಾಡಲು ಬಿಡುವುದಿಲ್ಲ. ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ” ಎಂದಿದ್ದಾರೆ.
ಬಿಂದು ಮಾನಸಿಕ ಅಸ್ವಸ್ಥೆ ಎಂದು ಸುನೀತಾ ಶುಕ್ಲಾ ಹೇಳಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲಿಯೂ ಹುಡುಗ ಹುಡುಗನನ್ನು ಮದುವೆಯಾಗಬಹುದು ಅಥವಾ ಹುಡುಗಿ ಹುಡುಗಿಯನ್ನು ಮದುವೆಯಾಗಬಹುದು ಎಂದು ಬರೆಯಲಾಗಿಲ್ಲ ಎಂದು ಅವರು ಹೇಳಿದರು.




