March 26, 2026

ಬೆಳ್ತಂಗಡಿ ದೇವಾಲಯದ ಬಳಿ ಹಿಂದುಯೇತರರ ವಾಹನಗಳ ಪ್ರವೇಶಕ್ಕೆ ನಿರ್ಬಂಧದ ಬ್ಯಾನರ್

0
image_editor_output_image-1928687225-1654328321057.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದೇವಾಲಯವೊಂದರ ಬಳಿ ಹಿಂದುಯೇತರ ಜನರ ಆಟೋ, ಟ್ಯಾಕ್ಸಿ ಮತ್ತಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಟೀಕೆಗಳು ವ್ಯಕ್ತವಾದ  ನಂತರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪಂಚಾಯಿತಿ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. 

ಸೌತಡ್ಕದ ಮಹಾಗಣಪತಿ ದೇವಾಲಯದ ಬಳಿ ಶುಕ್ರವಾರ ಬ್ಯಾನರ್ ಹಾಕಿರುವುದಾಗಿ ಸ್ಥಳೀಯರು ಹೇಳುತ್ತಾರೆ. ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಬ್ಯಾನರ್ ಹಾಕಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸರು ಪಂಚಾಯಿತಿಯವರನ್ನು ವಿಚಾರಿಸಬಹುದು, ದೇವಾಲಯದ ಆಡಳಿತ ಮಂಡಳಿಯವರೇ ಬ್ಯಾನರ್ ಹಾಕಿದಾರೆಯೇ ಅಥವಾ ಅವರು ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ತಿಳಿಯಬೇಕಾಗಿದೆ.

ಬ್ಯಾನರ್ ಬಗ್ಗೆ ಪ್ರತಿಕ್ರಿಯಿಸುವಂತೆ ಪಿಡಿಒಗೆ ಸೂಚಿಸಲಾಗಿದೆ.ಬ್ಯಾನರ್ ತೆಗೆದುಹಾಕುವ ಅಥವಾ ಮುಂದಿನ ಕ್ರಮದ ಬಗ್ಗೆ ಸ್ಥಳೀಯ ಆಡಳಿತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ತಾವು ಬ್ಯಾನರ್ ಹಾಕಿಲ್ಲ ಎಂದು ದೇವಾಲಯ ಆಡಳಿತ ಮಂಡಳಿ ಖಚಿತಪಡಿಸಿದೆ.  ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಕಾಕ್ಕಡ ಹೆಸರಿನಲ್ಲಿ ಹಾಕಲಾಗಿರುವ ಬ್ಯಾನರ್ ನಲ್ಲಿ ಸೌತಡ್ಕದಲ್ಲಿ ಅನ್ಯ ಕೋಮಿನವರು ಪ್ರವೇಶ ಮಾಡಿ, ಲವ್ ಜಿಹಾದ್ ಗಾಗಿ ಹಿಂದೂ ಭಕ್ತಾಧಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರಿಂದ ಹಿಂದೂಯೇತರ ಜನರ ಆಟೋ, ಟ್ಯಾಕ್ಸಿ ಮತ್ತಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!