ಮಡಿಕೇರಿ: ಕಾಡಿಗಟ್ಟುವ ಕಾರ್ಯಾಚರಣೆಯ ವೇಳೆ ಕಾಡಾನೆ ಮೃತ್ಯು
ಮಡಿಕೇರಿ: ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಯ ವೇಳೆ ಹೆಣ್ಣು ಕಾಡಾನೆ ಮೃತಪಟ್ಟಿರುವ ಘಟನೆ ಮಂಗಳವಾರ ಮಡಿಕೇರಿ ತಾಲೂಕಿನ ಮರಂದೋಡ ಗ್ರಾಮದಲ್ಲಿ ನಡೆದಿದೆ.
ಕಳೆದ 2 ದಿನಗಳಿಂದ ಚೆಯ್ಯಾಂಡಾಣೆ ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಕೆ ಕೈಗೊಂಡಿದ್ದು, ಮಂಗಳವಾರವೂ ಕಾರ್ಯಾಚರಣೆ ಮುಂದುವರೆಸಿತ್ತು.
ಸಾರ್ವಜನಿಕರ ಸಹಾಯದಿಂದ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಮಧ್ಯಾಹ್ನದ ನಂತರ ಕಾಡಾನೆಯೊಂದು ಗೋಚರಿಸಿದ್ದು, ಆನೆಯನ್ನು ಹಿಡಿಯಲು ಅರವಳಿಕೆ ಸಹಿತ ಕಾಡಾನೆಗೆ ಗುಂಡು ಹಾರಿಸಲಾಯಿತು. ಈ ವೇಳೆ ಆನೆಯು ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದೆ.
ಅರವಳಿಕೆಯಲ್ಲಿ ಓವರ್ ಡೋಸ್ ಆದ ಕಾರಣ ಆನೆ ಸತ್ತಿರಬಹುದು ಅಥವಾ ಹೃದಯಾಘಾತದಿಂದ ಆನೆ ಸತ್ತಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸ್ತಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ತಳದಲ್ಲಿ ಉನ್ನತ ಅರಣ್ಯಾಧಿಕಾರಿಗಳು ಬೀಡು ಬಿಟ್ಟಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.





