December 16, 2025

ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಐವರು ಆರೋಪಗಳ ಬಂಧನ

0
Sidhu-Moosewala-pose.jpg

ಡೆಹ್ರಾಡೂನ್‌: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಶಂಕಿತ ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಂಜಾಬ್ ಮತ್ತು ಉತ್ತರಾಖಂಡ್ ಜಂಟಿ ಪೊಲೀಸ್ ತಂಡವು ಅವನನ್ನು ಬಂಧಿಸಿದಾಗ ಶಂಕಿತನು ಪರ್ವತಗಳಲ್ಲಿ ಹೇಮಕುಂಡ್ ಸಾಹಿಬ್ ಯಾತ್ರೆಯ ಭಾಗವಾಗಿರುವ ಯಾತ್ರಾರ್ಥಿಗಳ ನಡುವೆ ಅಡಗಿಕೊಂಡಿದ್ದನು. ಶಂಕಿತನನ್ನು ಪಂಜಾಬ್‌ಗೆ ಕರೆತರಲಾಗುತ್ತಿದೆ ಎಂದು ತಿಳಿದುಬಂದಿದೆ.

ಇಂದು ಡೆಹ್ರಾಡೂನ್‌ನಿಂದ ಬಂಧಿತನಾಗಿರುವ ಶಂಕಿತ ವ್ಯಕ್ತಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿದ್ದು, ಗಾಯಕನ ಹತ್ಯೆಯ ಹೊಣೆಯನ್ನು ಅವನು ಹೊತ್ತುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಉತ್ತರಾಖಂಡದಿಂದ ಇನ್ನೂ ಐವರು ಶಂಕಿತರನ್ನು ಬಂಧಿಸಲಾಗಿದೆ. ಅವರನ್ನೆಲ್ಲ ಪಂಜಾಬ್‌ಗೆ ಕರೆದೊಯ್ಯಲಾಗುತ್ತಿದೆ. ನಿನ್ನೆ ಪಂಜಾಬ್‌ನ ಮಾನ್ಸಾದಲ್ಲಿ ಸಿಧು ಮೂಸ್ ವಾಲಾ ಅವರು ಎಸ್‌ಯುವಿ ಚಲಾಯಿಸುತ್ತಿದ್ದಾಗ ಗುಂಡು ಹಾರಿಸಿದ್ದರು.

ಈ ವರ್ಷದ ಆರಂಭದಲ್ಲಿ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಗಾಯಕ ಸಿಧು ಮೂಸೆ ವಾಲಾರ ಮೇಲೆ, ಸ್ವಯಂಚಾಲಿತ ಆಕ್ರಮಣಕಾರಿ ರೈಫಲ್‌ನಿಂದ 30 ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್ ಪೊಲೀಸ್ ಮುಖ್ಯಸ್ಥ ವಿಕೆ ಭಾವ್ರಾ ಅವರು ಈ ಹತ್ಯೆಯು ಗ್ಯಾಂಗ್ ನಡುವಿನ ಪೈಪೋಟಿಯ ಪರಿಣಾಮವಾಗಿ ತೋರುತ್ತಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಯುವ ಅಕಾಲಿ ನಾಯಕ ವಿಕ್ಕಿ ಮಿದ್ದುಖೇರಾ ಅವರ ಹತ್ಯೆಯಲ್ಲಿ ಗಾಯಕನ ಮ್ಯಾನೇಜರ್ ಶಗುನ್‌ಪ್ರೀತ್ ಅವರ ಹೆಸರನ್ನು ಉಲ್ಲೇಖಿಸಿ ಈ ಘಟನೆಯು ಗ್ಯಾಂಗ್ ನಡುವಿನ ಪೈಪೋಟಿಯ ಪ್ರಕರಣವೆಂದು ತೋರುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಅಂದು ಘಟನೆಯ ನಂತರ ಶಗುನ್‌ಪ್ರೀತ್ ಆಸ್ಟ್ರೇಲಿಯಾಕ್ಕೆ ಪರಾರಿಯಾಗಿದ್ದರು. ಸಿಧು ಮೂಸ್ ವಾಲಾ ಅವರ ಹತ್ಯೆಯು ಮಿದ್ದುಖೇರಾ ಹತ್ಯೆಗೆ ಪ್ರತೀಕಾರವಾಗಿ ಕಂಡುಬರುತ್ತಿದೆ ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಇದರೊಂದಿಗೆ ಸಿಧು ಮೂಸೆ ವಾಲಾರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪಂಜಾಬಿನ ಮಾನ್ಸಾ ಪೊಲೀಸ್ ಠಾಣೆಯಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಕಾರನ್ನು ಫೋರೆನ್ಸಿಕ್ ತಂಡವು ತನಿಖೆ ನಡೆಸಿದೆ. ಎರಡು ವಾಹನಗಳಲ್ಲಿ ಬಂದವರು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದಾಗ ಸಿಧು ಮೂಸ್ ವಾಲೆ ಚಲಾಯಿಸುತ್ತಿದ್ದ ಮಹೀಂದ್ರ ಥಾರ್ ಎಸ್ ಯುವಿಯನ್ನು ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕಾರಿನ ಮುಂಭಾಗ ಮತ್ತು ಎರಡೂ ಬದಿಗಳು ಬಹು ಬುಲೆಟ್ ರಂಧ್ರಗಳನ್ನು ಹೊಂದಿದ್ದು, ಕಾರನ್ನು ಎಲ್ಲಾ ಕಡೆಯಿಂದ ತಡೆಹಿಡಿದಿದ್ದು ಶೂಟರ್‌ಗಳು ಅನೇಕ ಸುತ್ತು ಗುಂಡು ಹಾರಿಸಿದ್ದಾರೆ ಎಂದು ಸೂಚಿಸುತ್ತದೆ. ಸುಮಾರು ಎಂಟರಿಂದ 10 ಮಂದಿ ದಾಳಿಕೋರರು ಗಾಯಕನಿಗೆ 30ಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಇಂದು ಬೆಳಗ್ಗೆ ತಿಳಿಸಿವೆ. ಇಷ್ಟು ಗುಂಡು ಹಾರಿಸಿದ ನಂತರವೂ ದಾಳಿಕೋರರು ಆತ ಬದುಕಿದ್ದಾನಾ ಎಂದು ಪರಿಶೀಲಿಸಿದರು.

ಪ್ರಕರಣದಲ್ಲಿ ಇದುವರೆಗೆ ಆರು ಮಂದಿ ಶಂಕಿತರನ್ನು ಬಂಧಿಸಲಾಗಿದೆ. ಹತ್ಯೆಯಾದ ಸ್ಥಳದಲ್ಲಿ ಪತ್ತೆಯಾದ ಗುಂಡುಗಳು ದಾಳಿಗೆ ಎಎನ್ 94 ರಷ್ಯಾದ ಅಸಾಲ್ಟ್ ರೈಫಲ್ ಅನ್ನು ಬಳಸಲಾಗಿದೆ ಎಂದು ಸೂಚಿಸುತ್ತದೆ. ಸಿಧು ಮೂಸ್ ವಾಲಾ ಅವರ ಕಾರಿನಲ್ಲಿ ಪಿಸ್ತೂಲ್ ಕೂಡ ಪೊಲೀಸರಿಗೆ ಸಿಕ್ಕಿದ್ದು, ಫೊರೆನ್ಸಿಕ್ ತನಿಖೆಯ ನಂತರ ಅದನ್ನು ಬಳಸಲಾಗಿದೆಯೇ ಎಂದು ನಿರ್ಧರಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!