ಕಾಸರಗೋಡು: ಎಂಡೋ ಪೀಡಿತ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ಥೆ ಪುತ್ರಿಯನ್ನು ಕೊಲೆಗೈದು ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ.
ಚಾಮುಂಡಿಕುನ್ನುವಿನ ವಿಮಲಕುಮಾರಿ ( 58) ಮತ್ತು ಪುತ್ರಿ ರೇಶ್ಮಾ ( 28) ಮೃತಪಟ್ಟವರು. ಆರಂಭದಲ್ಲಿ ತಾಯಿ ಎಂಡೋ ಸಲ್ಫಾನ್ ಪೀಡಿತ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ. ರಾಜಪುರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





