ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆ ಮಾಡಿದ ವ್ಯಕ್ತಿ
ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾರಾಮಾರಿ ನಡೆದಿದ್ದು, ಮುಖಂಡ ರಾಕೇಶ್ ಟಿಕಾಯತ್ ಮೇಲೆ ವ್ಯಕ್ತಿಯೊಬ್ಬ ಮೈಕ್‌ನಿಂದ ಹೊಡೆದು ಮಸಿ ಬಳೆದಿದ್ದಾನೆ.
ರೈತ ಸಂಘದ ಮೂಲ ಹೋರಾಟಗಾರರು ಕರೆದಿದ್ದ ಸಭೆಯಲ್ಲಿ ಹಾಜರಾಗಿದ್ದ ವ್ಯಕ್ತಿಯೊಬ್ಬ, ಮೋದಿ ಹೆಸರು ಕೂಗಿದ್ದ. ಏಕಾಏಕಿ ವೇದಿಕೆಗೆ ನುಗ್ಗಿದ್ದ ವ್ಯಕ್ತಿ, ರಾಕೇಶ್ ಟಿಕಾಯತ್ ಮೇಲೆ ಮೈಕ್ ಕಿತ್ತು ಹೊಡೆದು ನಂತರ ಎಲ್ಲರೂ ವ್ಯಕ್ತಿಯನ್ನು ಹಿಡಿದು ಥಳಿಸಿದರು. ಕುರ್ಚಿಗಳನ್ನು ಹಿಡಿದು ತೂರಿದರು.




