ಮಿನಿ ವ್ಯಾನ್, ಲಾರಿ ಮಧ್ಯೆ ಭೀಕರ ಅಪಘಾತ: 7 ಮಂದಿ ಮೃತ್ಯು, 11 ಮಂದಿಗೆ ಗಾಯ
ಆಂಧ್ರ ಪ್ರದೇಶ: ಮಿನಿ ವ್ಯಾನ್ ಮತ್ತು ನಿಂತಿದ್ದ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟು ಇತರ 11 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಭಾನುವಾರ ತಡರಾತ್ರಿ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ರೆಂಟಚಿಂತಲ ಎಂಬಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗೆ ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗುರ್ಜಾಲ ಡಿಎಸ್ ಪಿ ಜಯರಾಮ್ ತಿಳಿಸಿದ್ದಾರೆ. ಅತಿವೇಗದ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರೆಂಟಚಿಂತಲದಿಂದ ಕನಿಷ್ಠ 35 ಮಂದಿ ಪ್ರಯಾಣಿಕರು ಮಿನಿ ವ್ಯಾನ್ ನಲ್ಲಿ ಶ್ರೀಶೈಲಮ್ ಗೆ ಯಾತ್ರೆ ಹೊರಟಿದ್ದರು. ರೆಂಟಚಿಂತಲ ಹತ್ತಿರ ಬರುವಾಗ ಮಿನಿ ವ್ಯಾನ್ ನ ಚಾಲಕ ವಾಹನವನ್ನು ನಿಂತಿದ್ದ ಸ್ಟೇಷನರಿ ಲಾರಿಗೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿದ್ದಾರೆ.





