ಮಂಗಳೂರು: ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ ಬೆಲೆ ಮತ್ತಷ್ಟು ಏರಿಕೆ
ಉಡುಪಿ: ಅಕಾಲಿಕ ಮಳೆಯಿಂದಾಗಿ ಭಾರೀ ಹೆಚ್ಚಳ ಕಂಡಿದ್ದ ತರಕಾರಿ ಬೆಲೆ ಈಗ ಕೊಂಚ ಇಳಿಮುಖವಾಗುತ್ತಿದ್ದರೂ ಕೆಲವು ತರಕಾರಿಗಳ ಬೆಲೆ ಮತ್ತಷ್ಟು ಏರಿದೆ.
ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ ದರ ಶತಕ ದಾಟಿದೆ. ಕೊತ್ತಂಬರಿ ಸೊಪ್ಪಿಗೆ 150 ರೂ. ಇದ್ದರೆ ನುಗ್ಗೆಕಾಯಿ ದರ 120 ರೂ. ಇದೆ. ಒಮ್ಮೆಲೆ ಏರಿಕೆ ಕಂಡಿದ್ದ ಟೊಮೇಟೋ ದರ ಈಗ 70 ರೂ.ಗಳಿಗೆ ಬಂದು ನಿಂತಿದೆ.
ಅಲಸಂಡೆ ಕೆ.ಜಿ.ಗೆ 90 ರೂ., ಬೀನ್ಸ್ 70 ರೂ., ಬೆಂಡೆಕಾಯಿ 45-50 ರೂ., ಹೀರೆ 60-70 ರೂ., ಕ್ಯಾರೆಟ್ 60 ರೂ., ಮೂಲಂಗಿ 40 ರೂ. ದರವಿದೆ.




