ಕೆಜಿಎಫ್ -2 ‘ರಾಕಿ ಭಾಯ್’ ಶೈಲಿಯಲ್ಲಿ ಧೂಮಪಾನ ಮಾಡಿ ಆಸ್ಪತ್ರೆಗೆ ದಾಖಲಾದ ಅಪ್ರಾಪ್ತ ಬಾಲಕ

ಹೈದರಾಬಾದ್: ಅಪ್ರಾಪ್ತ ಯುವಕನೊಬ್ಬ ಕೆಜಿಎಫ್ ಚಾಪ್ಟರ್ 2 ಚಲನಚಿತ್ರ ನೋಡಿ ನಟ ಯಶ್ ಅನ್ನು ಅನುಕರಣೆ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾನೆ. ಈ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
‘ರಾಕಿ ಭಾಯ್’ ನ ಧೂಮಪಾನ ಶೈಲಿಯಿಂದ ಸ್ಫೂರ್ತಿ ಪಡೆದ ಅಪ್ರಾಪ್ತ ಬಾಲಕ ಎರಡು ದಿನದಲ್ಲಿ, ಒಂದು ಪ್ಯಾಕ್ ಸಿಗರೇಟ್ ಸೇದಿ ಕೆಮ್ಮು ಶುರುವಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ತಮ್ಮ ಮಗ ಮೊದಲ ಬಾರಿಗೆ ಸಿಗರೇಟ್ ಸೇದಿದ್ದಾನೆ ಎಂಬುದು ಪೋಷಕರಿಗೂ ತಿಳಿದಿರಲಿಲ್ಲ. ಎದೆಯ ಎಕ್ಸ್ ರೇ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ನಡೆಸಿದಾಗ, ಈ ಹುಡುಗನ ಬೆರಳುಗಳ ಮೇಲೆ ಕಲೆ ಕಂಡುಬಂದಿದೆ.
ಇದು ಸಾಮಾನ್ಯವಾಗಿ ಧೂಮಪಾನಿಗಳಲ್ಲಿ ಕಂಡುಬರುತ್ತದೆ ಎಂದು ಹೈದರಾಬಾದ್‌ನ ಸೆಂಚುರಿ ಹಾಸ್ಪಿಟಲ್ಸ್ ನ ಪಲ್ಮನಾಲಜಿಸ್ಟ್ ಸಲಹೆಗಾರ ಡಾ ರೋಹಿತ್ ರೆಡ್ಡಿ ಪಥೂರಿ ಹೇಳಿದ್ದಾರೆ.
ಕೆಜಿಎಫ್ 2 ರ ರಾಕಿ ಭಾಯ್ ನ ಧೂಮಪಾನ ಮಾಡುವ ಸ್ಟೈಲ್ ನಿಂದ ಪ್ರೇರಿತನಾಗಿದ್ದೆ ಎಂದು ಬಾಲಕ ತನ್ನ ಪೋಷಕರ ಮುಂದೆ ಮತ್ತು ವೈದ್ಯರ ಬಳಿ ಒಪ್ಪಿಕೊಂಡಾಗ ಈ ಘಟನೆ ಬಯಲಾಗಿದೆ.