ಕ್ಯಾಂಪಸ್ ಫ್ರಂಟ್ ವತಿಯಿಂದ ನರಮೇಧ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ
ಮೈಸೂರು: ನರಮೇಧ ವಿಷಯದ ಕುರಿತಾದ ಸಾಕ್ಷ್ಯ ಚಿತ್ರ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವು ಮೈಸೂರಿನ ಅರ್ಫಾತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಅಡ್ವಕೇಟ್ ರೋಶನ್ ನವಾಝ್ ಮಾತನಾಡಿದರು.




ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪಸ್ ಫ್ರಂಟ್ ರಾಷ್ಟ್ರಾಧ್ಯಕ್ಷರಾದ ಎಮ್.ಎಸ್ ಸಾಜೀದ್ ಮಾತನಾಡಿ ದೇಶದಲ್ಲಿ ದಿನಪ್ರತಿಯಾಗಿ ಹಲವು ರೀತಿಗಳಲ್ಲಿ ದೌರ್ಜನ್ಯ, ಹತ್ಯೆಗಳು ಮುಸಲ್ಮಾನರ ಮೇಲೆ ನಡೆಯುತ್ತಾ ಇದೆ. ದೇಶದಲ್ಲಿ ದೊಡ್ಡ ಪ್ರಮಾಣದ ನರಮೇಧ ನಡೆಸಲು ಇಲ್ಲಿಯ ಫ್ಯಾಸಿಸ್ಟರು ಮತ್ತು ಸರ್ಕಾರ ಪ್ರಯತ್ನಿಸುತ್ತಿದೆ, ಇದರ ಕುರಿತಾದ ನರಮೇಧದ ಹಂತಗಳನ್ನು ವಿವರಿಸುವ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿ ಜನತೆಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕ್ಯಾಂಪಸ್ ಫ್ರಂಟ್ ನಡೆಸುತ್ತಿದೆ ಎಂದು ಹೇಳಿದರು.
ಅದೇ ರೀತಿಯಾಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರು, ಸಾಹಿತಿಗಳು ಆದಂತಹ ಮಹೇಶ್ ಚಂದ್ರ ಗುರು ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಹೆಡ್ಗೆವಾರ್, ಸಾರ್ವರ್ಕರ್, ಗೋಳ್ವಾಲ್ಕರ್ ಇವರು ಯಾರು ಭಾಗವಹಿಸಿಲ್ಲ ನಮ್ಮಲ್ಲಿ ದಾಖಲೆಗಳಿವೆ. ಇಂದು ಇಂತಹ ಜನರ ಬಗ್ಗೆ ಮಕ್ಕಳು ಶಾಲೆಯಲ್ಲಿ ಕಲಿಯಬೇಕಾದ ದುರಾವಸ್ಥೆ ನಮ್ಮ ಕರ್ನಾಟಕಕ್ಕೆ ಬಂದಿದೆ. ಇಂತಹ ಮನುವಾದಿಗಳ ಕುತಂತ್ರಗಳನ್ನು ವಿಫಲಗೊಳಿಸಲು ಜಾತ್ಯಾತೀತ ಶಕ್ತಿಗಳ ಒಗ್ಗಟ್ಟು ಅನಿವಾರ್ಯ ಎಂದರು.
ಅಡ್ವಕೇಟ್ ರಂಗಸ್ವಾಮಿ ಅವರು ಮಾತನಾಡಿ ಹಿಟ್ಲರ್ ಮಾದರಿಯಲ್ಲೇ ದೇಶದಲ್ಲೂ ನರಮೇಧ ನಡೆಸಲು ಫ್ಯಾಸಿಸ್ಟ್ ಶಕ್ತಿಗಳು ಮುಂದಾಗಿದ್ದು, ಅದನ್ನು ತಡೆಯಲು ನಾವು ಕಟ್ಟಿಬಧ್ದರಾಗಬೇಕಾದ ಅವಶ್ಯಕತೆಯಿದೆ ಎಂದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮೈಸೂರು ಜಿಲ್ಲಾಧ್ಯಕ್ಷ ಫೈಝಾನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





