March 26, 2026

ಶೋಕ ನದಿಗೆ ಉರುಳಿ ಬಿದ್ದ ವಾಹನ: ಏಳು ಮಂದಿ ಯೋಧರು ಮೃತ್ಯು

0
image_editor_output_image754732812-1653715538288.jpg

ಶ್ರೀನಗರ: ಸೇನೆಯ 26 ಯೋಧರು ಪ್ರಯಾಣಿಸುತ್ತಿದ್ದ ವಾಹನವು ನಿಯಂತ್ರಣ ತಪ್ಪಿ ಶುಕ್ರವಾರ ಲಡಾಖ್‌ನ ತುರ್ತುಕ್‌ ವಲಯದಲ್ಲಿ ಶೋಕ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಯೋಧರು ಮೃತಪಟ್ಟಿದ್ದಾರೆ.

ಪರ್ತಾಪುರ್‌ನಿಂದ ಹನಿಫ್‌ ಉಪವಲಯದ ಶಿಬಿರಕ್ಕೆ ಯೋಧರು ತೆರಳುತ್ತಿದ್ದರು. ವಾಹನದಲ್ಲಿದ್ದ ಇತರೆ ಯೋಧರು ಗಾಯಗೊಂಡಿದ್ದು, ಪರ್ತಾಪುರ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸಲು ಕ್ರಮವಹಿಸಲಾಗಿದೆ. ಲೇಹ್‌ನಿಂದ ತಜ್ಞ ವೈದ್ಯರನ್ನು ಕರೆಸಲಾಗಿದೆ ಎಂದು ತಿಳಿಸಿದ್ದಾರೆ.

ಶೋಕ ಅನ್ನು ‘ಸಾವಿನ ನದಿ’ ಎಂದು ಗುರುತಿಸಲಾಗುತ್ತದೆ. ಇದು,ಸಿಂಧೂ ನದಿಯ ಉಪನದಿಯಾಗಿದ್ದು, 550 ಕಿ.ಮೀ ನಷ್ಟು ದೂರ ಉತ್ತರ ಲಡಾಖ್‌, ಗಿಲ್‌ಗಿಟ್‌, ಬಾಲ್ಟಿಸ್ತಾನ್‌ ವಲಯದಲ್ಲಿ ಹರಿಯುತ್ತದೆ.

Leave a Reply

Your email address will not be published. Required fields are marked *

error: Content is protected !!