March 26, 2026

ಮಂಗಳೂರು: ಕೊಂಕಣಿ ಸಾಹಿತಿ ಸಿಜಿಎಸ್ ತಾಕೋಡ್ ನಿಧನ

0
image_editor_output_image10669437-1653715237658.jpg

ಮಂಗಳೂರು: ಹೆಸರಾಂತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ ‘ಸಿಜಿಎಸ್ ತಾಕೋಡ್’ ಎಂದೇ ಜನಪ್ರಿಯರಾಗಿದ್ದ ಸಿರಿಲ್ ಜಿ ಸಿಕ್ವೇರಾ ಮೇ 28 ರಂದು ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ದಕ ಜಿಲ್ಲೆಯ ತಾಕೋಡ್‌ನಲ್ಲಿ ಜನಿಸಿದ ಸಿರಿಲ್ ತಮ್ಮ ಆರಂಭಿಕ ಶಿಕ್ಷಣವನ್ನು ತಾಕೋಡ್, ಮೂಡುಬಿದಿರೆ ಮತ್ತು ಬೆಂಗಳೂರಿನಲ್ಲಿ ಮಾಡಿದರು .ಸಿರಿಲ್ ಅವರು 12 ನೇ ವಯಸ್ಸಿನಲ್ಲಿ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದರು.

ಅವರು ರಾಕ್ನೋ ವಾರಪತ್ರಿಕೆಯ ಉಪ ಸಂಪಾದಕರಾಗಿದ್ದರು. ನಂತರ ‘ಕಾಣಿಕ’ ಮತ್ತು ‘ಉಮಾಳೊ’ ಕೊಂಕಣಿ ನಿಯತಕಾಲಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು.

ಸಿಜೆಎಸ್‌ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದಿದ್ದರೂ, ಅವರ ಹಾಸ್ಯಮಯ ಬರಹಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!