ತ್ರಿಪುರಾದ ಮುಸ್ಲಿಂ ನರಮೇಧವು ಸರ್ಕಾರದ ಸಾಂವಿಧಾನಿಕ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಸಾಬೀತುಪಡಿಸುತ್ತದೆ: ಎನ್ ಡಬ್ಲ್ಯೂ ಎಫ್
ಶಾಂತಿ ಸೌಹಾರ್ದತೆ ಮತ್ತು ವೈವಿಧ್ಯಮಯ ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿರುವ ಅಸ್ಸಾಂನ ಜಿಲ್ಲೆಯಾದ ತ್ರಿಪುರಾದಲ್ಲಿ ಇತ್ತೀಚೆಗೆ ಭೀಕರ ರಕ್ತದೋಕುಳಿಯಾಗಿತ್ತು.
ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನದ ಮೇಲೆ ನಡೆಸಿದ ದಾಳಿಯನ್ನು ವಿರೋಧಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಮತ್ತು ಬಿಜೆಪಿಯ ಸೈದ್ಧಾಂತಿಕ ಮೂಲ ಅಂಗವಾದ ವಿಶ್ವಹಿಂದು ಪರಿಷತ್ ಜಂಟಿಯಾಗಿ ಆಯೋಜಿಸಿ ನಡೆಸಿದ್ದ ರಾಲಿಯು ಹಿಂಸಾತ್ಮಕವಾಗಿ ಪರಿವರ್ತನೆಗೊಂಡಿತ್ತು. ಆ
ರಾಲಿಯು ಮೇಲ್ನೋಟಕ್ಕೆ ಬಾಂಗ್ಲಾದೇಶದ ಕೋಮುಗಲಭೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನಾ ರಾಲಿಯಾದರೂ, ಅಲ್ಲಿನ ದೃಶ್ಯಗಳು ಸ್ಪಷ್ಟವಾಗಿ ಈಶಾನ್ಯ ರಾಜ್ಯದ ದೌರ್ಜನ್ಯಗಳಿಗೆ ಸಾಕ್ಷಿಯಾಗಿತ್ತು.
ಐದು ಜನರಿಗಿಂತ ಹೆಚ್ಚಿನ ಜಮಾವಣೆಯನ್ನು ನಿಷೇಧಿಸುವ ದಂಡ ಸಂಹಿತೆ, ಅಧಿನಿಯಮ 144 ಪ್ರಕ್ರಿಯೆ ಕೂಡ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ವಿಫಲವಾಯಿತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದೆನ್ನಲಾದ ಮನೆಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ಲೂಟಿ ಮಾಡಲಾಯಿತು.
ಮಸೀದಿಗಳು ಮತ್ತು ಮುಸ್ಲಿಂ ವಸತಿಗಳನ್ನು ಗುರಿಯಾಗಿಸಿ ಮಾಡಿದ ಈ ದಾಳಿಗಳು ತೀವ್ರ ಖಂಡನೀಯವಾಗಿದೆ. ಖಡ್ಗಗಳನ್ನು ಹಿಡಿದು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುವುದು, ಮುಸಲ್ಮಾನರ ಅಂಗಡಿಗಳನ್ನು ಗುರಿಯಾಗಿಟ್ಟು
ಧ್ವಂಸಗೊಳಿಸಿ ಅವರ ಮನೆಗಳ ಮೇಲೆ ದಾಳಿ ಮಾಡುವುದು ಆಂತರಿಕ ಭಯೋತ್ಪಾದನೆಯನ್ನು ಸೃಷ್ಟಿಸುವುದು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಇವುಗಳೆಲ್ಲವೂ ಪ್ರತಿಭಟನೆಯ ಭಾಗವಾಗಿತ್ತು.
ಹಿಂಸೆಯ ತಡೆ ಮತ್ತು ಅದನ್ನು ಎದುರಿಸಿ ಶಾಂತಿ ನೆಲೆಸುವಂತೆ ಮಾಡುವುದು ಬಹಳ ಕಷ್ಟಕರವಾಗಿವೆ. ನಮ್ಮ ದೇಶದಲ್ಲಿ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಮತ್ತು ಚಿಂತನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲದಂತಾಗಿದೆ. ಶಾಂತಿಯುತ ಮತ್ತು ಕಾನೂನುಬದ್ಧ ಪ್ರತಿಭಟನೆಗಳನ್ನು ಮೂಲಭೂತವಾದಿ ಅಜೆಂಡಾಗಳು ಮತ್ತು ಹಿಂಸಾತ್ಮಕವಾಗಿ ಬದಲಾಯಿಸಿರುವ ಚಿಂತಾಜನಕ ಗಣತಂತ್ರದಲ್ಲಿ ನಾವಿದ್ದೇವೆ.
ದೇಶದ ಪ್ರಜೆಗಳಿಗೆ ಭದ್ರತೆ, ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆಯ ಭರವಸೆ ನೀಡುವುದು – ಪ್ರಜಾಪ್ರಭುತ್ವದ ಸರಕಾರದ ಕರ್ತವ್ಯವಾಗಿದೆ. ಆದ್ದರಿಂದ ನ್ಯಾಯೋಚಿತ ತನಿಖೆ ನಡೆಸಿ ತ್ರಿಪುರಾ ಕ್ಷೋಬೆಗೆ ರೂವಾರಿಯಾಗಿರುವ ಅಪರಾಧಿ ಸಂಘಟಕರು ಮತ್ತು ಪ್ರಚಾರಕರನ್ನು ಗುರುತಿಸಿ ಆರೋಪಿಗಳನ್ನು ದಂಡಿಸಬೇಕಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಒತ್ತಾಯಿಸುತ್ತದೆ. ಗಲಭೆಗೆ ಸಂಪರ್ಕ ಹೊಂದಿರುವ ವಿಎಚ್ ಪಿ ಹಾಗೂ ಇನ್ನಿತರ ಸದೃಶ ಗುಂಪುಗಳನ್ನು ಕಟ್ಟುನಿಟ್ಟಿನ ವಿಚಾರಣೆಗೊಳಪಡಿಸಬೇಕು.
ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ವೈದ್ಯಕೀಯ ನೆರವು ಒದಗಿಸಬೇಕು. ಧ್ವಂಸಗೊಂಡ ಮಸೀದಿಗಳು ಅಂಗಡಿ-ಮುಂಗಟ್ಟುಗಳು ಮತ್ತು ಮನೆಗಳ ಪುನರ್ನಿರ್ಮಾಣ ಹಾಗೂ ಸಮಗ್ರ ಪರಿಹಾರ ನಿಧಿಯನ್ನು ನೀಡಬೇಕೆಂದು ಕೋರುತ್ತಿದ್ದೇವೆ.
ಧರ್ಮದ ಹೆಸರಿನಲ್ಲಿ ಯಾವೊಬ್ಬನೂ ಹಿಂಸಾಚಾರಕ್ಕೆ ಮೊರೆಹೋಗಬಾರದು ಎಂಬ ಜನಜಾಗೃತಿಯನ್ನು ಜನತೆಯಲ್ಲಿ ಮೂಡಿಸುವುದು ಮತ್ತು ದೌರ್ಜನ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುವುದು ದೇಶ ಹಾಗೂ ಮಾನವೀಯತೆಯ ಕೈಯಲ್ಲಿದೆ. ಹಾಗೂ ಇಂದಿನ ಕಾಲದ ಬೇಡಿಕೆಯಾಗಿದೆ.
ಮೌನವು ಹಿಂಸೆಯನ್ನು ಪ್ರಚೋದಿಸುತ್ತದೆ:
ಆದ್ದರಿಂದ ನ್ಯಾಷನಲ್ ವಿಮೆನ್ಸ್ ಫ್ರಂಟ್ ಐಕ್ಯಮತದ ಜೊತೆಗೆ ನಿಲ್ಲುತ್ತದೆ. ಮತ್ತು ತೊಂದರೆಗೀಡಾದ ಕುಟುಂಬಗಳಿಗೆ ಬೆಂಬಲದ ಹಸ್ತ ಚಾಚುತ್ತದೆ. ಸಮುದಾಯದ ಮೇಲಿನ ಕಾಳಜಿಯನ್ನು ಬಹಿರಂಗವಾಗಿ ಎತ್ತಿಹಿಡಿಯುತ್ತಾ ಅಸಹಿಷ್ಣುತೆಯ ವಿರುದ್ಧದ ಧ್ವನಿಯನ್ನು ಒಟ್ಟಾಗಿ ಎತ್ತಿಹಿಡಿಯಲು ಕರೆ ನೀಡುತ್ತದೆ.