March 25, 2026

ಬೈಂದೂರು: ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದ ಅಲೆಗೆ ಸಿಲುಕಿ ಮುಳುಗಡೆ: ಎಲ್ಲಾ ಮೀನುಗಾರರ ರಕ್ಷಣೆ

0
image_editor_output_image-564576820-1653284192107.jpg

ಬೈಂದೂರು: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಮುಳುಗಡೆಯಾದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಎಲ್ಲಾ ಐದು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಶಿರೂರು ನಾಖುದಾ ಮೊಹಲ್ಲದಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಬೀಬಿ ಆಮೀನಾ (𝙸𝙽𝙳-𝙺𝙰-03-𝙼𝙾-3937) ಎಂಬ ದೋಣಿಯು ಸಮುದ್ರದ ಅಲೆಗೆ ಸಿಲುಕಿ ಮುಳುಗಿದೆ.

ಮೀನುಗಾರರಾದ ಸದ್ಕೆ ಮುಷ್ತಾಕ್, ರೋಗೆ ಅಬೂಬಕ್ಕರ್, ಭೋಂಬಾ ಮೀರಾ, ದಾಂಡಯ್ಯ ಅಶ್ರಫ್, ಬೋಡರ್ನಿ ಶಬ್ಬೀರ್ ಎಂಬವರನ್ನು ರಕ್ಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!