ಮರಕ್ಕೆ ಕ್ರೂಸರ್ ಢಿಕ್ಕಿ: ಮಕ್ಕಳು ಸಹಿತ ಸ್ಥಳದಲ್ಲೇ ಏಳು ಜನರು ಮೃತ್ಯು
ಧಾರವಾಡ: ಮರಕ್ಕೆ ಕ್ರೂಸರ್ ಢಿಕ್ಕಿ ಹೊಡೆದು ಸ್ಥಳದಲ್ಲೇ ಏಳು ಜನರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಆರು ಜನರು ಗಂಭೀರ ಗಾಯಗೊಂಡಿದ್ದು, ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿಕೊಂಡು ವಾಹನದಲ್ಲಿ ಬರುತ್ತಿತ್ತು ಎನ್ನಲಾಗಿದೆ.
ಅನನ್ಯ (14), ಹರೀಶ (13) ಶಿಲ್ಪಾ (34), ನೀಲವ್ಚ (60), ಮಧುಶ್ರೀ (20), ಮಹೇಶ್ವರಯ್ಯ (11), ಶಂಭುಲಿಂಗಯ್ಯ (35) ಸಾವನ್ನಪ್ಪಿದ ದುರ್ದೈವಿಗಳು.
ಮನಸೂರ ಗ್ರಾಮದಿಂದ ನಿಗದಿ (ಬೆನಕನಕಟ್ಟಿ) ಗೆ ಹೋಗುವಾಗ ಈ ಘಟನೆ ನಡೆದಿದೆ. ಒಟ್ಟು ಏಳು ಜನ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಢಿಕ್ಕಿ ಸಂಭವಿಸಿದೆ.




