February 2, 2026

ಉಪ್ಪಳ: ಮನೆಯಿಂದ ಚಿನ್ನಾಭರಣ ಮತ್ತು ನಗದು ದರೋಡೆ

0
istockphoto-623985786-612x612.jpg

ಮಂಜೇಶ್ವರ: ಉಪ್ಪಳದಲ್ಲಿ ಮನೆಯೊಂದರ ಬೀಗ ಹಾಕಿರುವ ಎರಡನೇ ಅಂತಸ್ತಿನ ಬಾಗಿಲಿನ ಒಳಗೆ ನುಗ್ಗಿ ದರೋಡೆ ನಡೆಸಿ ಎಂಟು ಪವನ್ ಚಿನ್ನಾಭರಣ ಹಾಗೂ 1,36,000 ರೂ. ಉಪ್ಪಳ ಫಿರ್ದೌಸ್ ನಗರದ ಶೇಖ್ ಇಬ್ರಾಹಿಂ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ.

ಇಬ್ರಾಹಿಂ ಮತ್ತು ಅವರ ಕುಟುಂಬ ಮುಂಬೈನಲ್ಲಿದ್ದಾರೆ. ಅವರು ಜನವರಿಯಲ್ಲಿ ಮನೆಗೆ ಹಿಂತಿರುಗಿದ್ದು ಬಳಿಕ ಮುಂಬೈಗೆ ತೆರಳಿದ್ದರು. ಮನೆಯ ಎರಡನೇ ಮಹಡಿಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಮೇರಾದಲ್ಲಿ ಇಡಲಾಗಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!