February 1, 2026

ಸೋಮವಾರಪೇಟೆ: ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ: ಸಿ ಆರ್ ಪಿ ಎಫ್ ಯೋಧನಿಗೆ ತೀವ್ರ ಗಾಯ

0
IMG-20220512-WA0012.jpg

ಸೋಮವಾರಪೇಟೆ: ಸಮೀಪ ನಗರೂರು ಬಳಿ ಮೇ 12 ರಂದು ಸ್ಕೂಟಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಘಟನೆಯಿಂದ ಐಗೂರು ನಿವಾಸಿ ಸಿ ಆರ್ ಪಿ ಎಫ್ ಯೋಧ ಡಾಲು ಎಂಬುವವರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಡಿಕ್ಕಿಯ ರಭಸಕ್ಕೆ ಡಾಲು ರವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯ ಸಂಭವಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮೈಸೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಸಣ್ಣಪುಟ್ಟ ಗಾಯಗೊಂಡಿರುವ ಮನೋಜ್ ಹಾಗೂ ಆಸಿಫ್ ಎಂಬುವವರನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!