February 2, 2026

ಕೇರಳ: ಲಿಫ್ಟ್‌ನಲ್ಲಿ ತಲೆ ಸಿಕ್ಕಿಹಾಕಿಕೊಂಡು ವ್ಯಕ್ತಿ ಸಾವು

0
image_editor_output_image1230484217-1652198168013.png

ತಿರುವನಂತಪುರಂ: ಮಳಿಗೆಯೊಂದರ ಲಿಫ್ಟ್‌ನಲ್ಲಿ 54 ವರ್ಷದ ವ್ಯಕ್ತಿಯೊಬ್ಬರ ತಲೆ ಸಿಕ್ಕಿಹಾಕಿಕೊಂಡು ಮೃತಪಟ್ಟ ಘಟನೆ ಕೇರಳದ ತಿರವನಂತಪುರಂನ ಅಂಬಲಮಕ್ಕು ಎಂಬಲ್ಲಿ ಮಂಗಳವಾರ ಸಂಭವಿಸಿದೆ.

ಅವಘಡ ಸಂಭವಿಸಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದಾದರೂ ವ್ಯಕ್ತಿಯ ಪ್ರಾಣವನ್ನು ಕಾಪಾಡಲು ಸಾಧ್ಯವಾಗಿಲ್ಲ.

ಸತೀಶ್‌ ಎಂದು ಗುರುತಿಸಲಾದ ಮೃತ ವ್ಯಕ್ತಿಯು ಕಳೆದ 25 ವರ್ಷಗಳಿಂದ ಅದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಶವವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!