February 2, 2026

ಮಡಿಕೇರಿ: ಆನೆ ದಂತದಲ್ಲಿ ಟ್ರೋಫಿ ತಯಾರಿಸಿ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

0
image_editor_output_image618718686-1652195610534.png

ಮಡಿಕೇರಿ: ಆನೆ ದಂತದಲ್ಲಿ ನಿರ್ಮಿಸಿದ್ದ ಟ್ರೋಫಿಯನ್ನು ಮಾರಾಟ ಮಾಡಲು ಯತ್ನಿಸಿ ಇಬ್ಬರು ಅರಣ್ಯ ಸಂಚಾರಿ ದಳದ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ರಫೀಕ್​ ಅಹಮದ್​ ಖಾನ್​ ಹಾಗೂ ಫಾಜಿಲ್​ ಖಾನ್​ ಬಂಧಿತ ಆರೋಪಿಗಳು.

ಇವರಿಬ್ಬರೂ ಮಡಿಕೇರಿಯ ಚೈನ್​ ಗೇಟ್​ ಬಳಿಯ ಹಿಂದು ರುದ್ರಭೂಮಿ ಮುಂಭಾಗದ ರಸ್ತೆಯಲ್ಲಿ ಭಾನುವಾರ ಸಂಜೆ ಅಕ್ರಮವಾಗಿ ಸಂಗ್ರಹಿಸಿದ್ದ ಆನೆ ದಂತದಲ್ಲಿ ಕೆತ್ತಲಾದ ಟ್ರೋಫಿಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು.

ಈ ವೇಳೆ ದಾಳಿ ಮಾಡಿದ ಮಡಿಕೇರಿ ಅರಣ್ಯ ಸಂಚಾರ ದಳದ ಸಬ್​ ಇನ್ಸ್​ಪೆಕ್ಟರ್​ ಸಿ.ಯು. ಸವಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ಆನೆ ದಂತದ ಟ್ರೋಫಿಯನ್ನು ವಶಕ್ಕೆ ಪಡೆದಿದೆ.

Leave a Reply

Your email address will not be published. Required fields are marked *

error: Content is protected !!