February 1, 2026

ಪತ್ರಕರ್ತ ದಾನಿಶ್‌ ಸಿದ್ದೀಕಿ ಸೇರಿದಂತೆ ನಾಲ್ವರು ಭಾರತೀಯರಿಗೆ ‘ಪುಲಿಟ್ಜರ್’ ಪ್ರಶಸ್ತಿ

0
image_editor_output_image1494898465-1652160663533.jpg

ನ್ಯೂಯಾರ್ಕ್: ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದ ದಾನಿಶ್‌ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯ ಛಾಯಾಗ್ರಾಹಕರು 2022ನೇ ಸಾಲಿನ ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಫೀಚರ್ ಫೋಟೊಗ್ರಫಿ’ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ದೊರೆತಿದೆ.

ಅದ್ನಾನ್ ಅಬಿದಿ, ಸನಾ ಇರ್ಷಾದ್ ಮಟ್ಟೂ ಹಾಗೂ ಅಮಿತ್ ದವೆ ಅವರು ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾದ ಇತರ ಭಾರತೀಯ ಛಾಯಾಗ್ರಾಹಕರು.

‘ಭಾರತದಲ್ಲಿ ಕೋವಿಡ್‌ಗೆ ಸಂಬಂಧಿಸಿ ಇವರು ತೆಗೆದ ಚಿತ್ರಗಳು ಅನ್ಯೋನ್ಯತೆ ಮತ್ತು ವಿನಾಶವನ್ನು ಸಮತೋಲನದಿಂದ ಬಿಂಬಿಸಿವೆ. ಜತೆಗೆ ನೋಡುಗರಿಗೆ ಉನ್ನತ ಅರ್ಥವನ್ನು ನೀಡಿವೆ. ಇದಕ್ಕಾಗಿ ಪ್ರಶಸ್ತಿ ನೀಡಲಾಗಿದೆ’ ಎಂದು ‘ಪುಲಿಟ್ಜರ್’ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಇವರೆಲ್ಲರ ಕೆಲಸವನ್ನು ಬ್ರೇಕಿಂಗ್ ನ್ಯೂಸ್ ಫೋಟೊಗ್ರಫಿ ವಿಭಾಗದಿಂದ ‘ಫೀಚರ್ ಫೋಟೊಗ್ರಫಿ’ಗೆ ತೀರ್ಪುಗಾರರು ವರ್ಗಾಯಿಸಿದ್ದರು.

Leave a Reply

Your email address will not be published. Required fields are marked *

error: Content is protected !!