ವಿಟ್ಲ: ಶನಿವಾರ ಮತ್ತು ಭಾನುವಾರ
ಪ್ರೀಮಿಯರ್ ಲೀಗ್ MPL ಕ್ರಿಕೆಟ್ ಪಂದ್ಯಾಟ: ಚಿತ್ರನಟ ದುನಿಯಾ ವಿಜಯ್ ಅವರಿಂದ ಚಾಲನೆ
ವಿಟ್ಲ: ವಿಟ್ಲದ ದುನಿಯಾ ಫ್ರೆಂಡ್ಸ್ ವತಿಯಿಂದ ಎಂಟು ತಂಡಗಳ ಪ್ರೀಮಿಯರ್ ಲೀಗ್ ಎಂಪಿಎಲ್ 2022 ಕ್ರಿಕೆಟ್ ಪಂದ್ಯಾಟ ಬಾಕಿಮಾರ್ ಗದ್ದೆಯಲ್ಲಿ ಮೇ 7 ಮತ್ತು 8ರ ಶನಿವಾರ ಮತ್ತು ಭಾನುವಾರ ನಡೆಯಲಿದೆ.
ಪ್ರಥಮ ಬಹುಮಾನ ರೂ. 75000 ಮತ್ತು ದ್ವಿತೀಯ ಬಹುಮಾನ ರೂ. 50,000 ನಗದು ದೊರೆಯಲಿದೆ. ಚಾಂಪಿಯನ್ ಆದ ತಂಡದ ಮಾಲೀಕರಿಗೆ ಹೀರೋ ಸ್ಪೆಂಡರ್ ಬೈಕ್ ಕೊಡುಗೆಯಾಗಿ ನೀಡಲಾಗುತ್ತದೆ.
ಈ ಪಂದ್ಯಾಟದ ಉದ್ಘಾಟನೆಯನ್ನು ಕನ್ನಡ ಸಿನಿಮಾ ನಟ ದುನಿಯಾ ವಿಜಯ್ ಮತ್ತು ತುಳು ಚಿತ್ರ ನಟ ಶ್ರೀನಿವಾಸ್ ಚಂದಳಿಕೆ ನೆರವೇರಿಸಲಿದ್ದಾರೆ. ನೆಟ್ ಬಾಲ್ ಚಾಂಪಿಯನ್ ನಿತಿನ್ ಪೂಜಾರಿ ವಿಟ್ಲ, ಮತ್ತು ರ್ಯಾಂಕ್ ವಿಜೇತ ಮೊಹಮ್ಮದ್ ಕೈಫ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಂದು ದುನಿಯಾ ಫ್ರೆಂಡ್ಸ್ ವಿಕೆಎಂ ಹಂಝ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.