March 20, 2026

ಮಂಗಳೂರು: ಒಂದೇ ಬೈಕ್ ನಲ್ಲಿ ಐವರು ಪ್ರಯಾಣ: ಕ್ರಮಕ್ಕೆ ಆಗ್ರಹಿಸಿದ ಶಾಸಕ ವೇದವ್ಯಾಸ್ ಕಾಮತ್‌

0
image_editor_output_image316901953-1651850587415.jpg

ಮಂಗಳೂರು: ಎಂ. ಜಿ ರಸ್ತೆಯಲ್ಲಿ ಪಿವಿಎಸ್‌ ಕಡೆಯಿಂದ ಲಾಲ್‌ಭಾಗ್‌ ಕಡೆಗೆ ಒಂದೇ ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದ ಬಗ್ಗೆ ವಿಡಿಯೋವನ್ನು ಶಾಸಕ ವೇದವ್ಯಾಸ್ ಕಾಮತ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಸಂಬಂಧಪಟ್ಟ ವಾಹನ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಬೈಕ್ ಮುಂಭಾಗದಲ್ಲಿ ಇಬ್ಬರು ಹೆಣ್ಣು ಮಕ್ಕಳು, ಒಬ್ಬಾಕೆ ಪೆಟ್ರೋಲ್ ಟ್ಯಾಂಕ್‌ ಮೇಲೆ ಕುಳಿತುಕೊಂಡಿದ್ದಾಳೆ.

ಇನ್ನೊಬ್ಬಳು ನಿದ್ದೆ ಮಾಡುತ್ತಿದ್ದಾಳೆ. ನಂತರದಲ್ಲಿ ಹೆಲ್ಮೆಟ್‌ ಹಾಕಿರುವ ಯುವಕ ಬೈಕ್‌ ಚಲಾಯಿಸುತ್ತಿದ್ದಾನೆ.
ಆತನ ಹಿಂಭಾಗದಲ್ಲಿ ಇನ್ನೊಬ್ಬ ಹುಡುಗ ಕುಳಿತ್ತಿದ್ದು, ಅವನಲ್ಲಿ ಹೆಲ್ಮೆಟ್ ಇಲ್ಲ, ಕೊನೆಯಲ್ಲಿ ಹೆಲ್ಮೆಟ್ ಧರಿಸಿದ ಮಹಿಳೆ ಕುಳಿತ್ತಿದ್ದಾಳೆ.

ಇಷ್ಟು ಜನರನ್ನು ಕುಳ್ಳಿರಿಸಿಕೊಂಡಿದ್ದರೂ ಬೈಕ್ ಸವಾರ ಅತ್ಯಂತ ವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಅಪಾಯಕಾರಿಯಾಗಿ ಕಾಣುತ್ತಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ವೇದವ್ಯಾಸ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!