March 20, 2026

ವಿದ್ಯುತ್ ಸ್ಪರ್ಶಿಸಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತ್ಯು

0
n383793576165184604463331adeea95d7ae3b5aea80bffd2b4e0981eb0090afb788723270db12bb33b0371.jpg

ಕೊಪ್ಪಳ: ಮನೆಯಲ್ಲಿ ಬಟ್ಟೆ ಒಣಹಾಕುವಾಗ ವಿದ್ಯುತ್ ಸ್ಪರ್ಶಿಸಿ ತಾಯಿ – ಮಕ್ಕಳು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶೈಲಮ್ಮ(28) ಮತ್ತು ಇವರ ಮಕ್ಕಳಾದ ಸಾನ್ವಿ(4), ಪವನ್ (2) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ಶೈಲಮ್ಮ ಬಟ್ಟೆ ತೊಳೆದು ಒಣಹಾಕುವಾಗ ಮಕ್ಕಳು ಪಕ್ಕದಲ್ಲೇ ಅಮ್ಮನ ಜೊತೆ ಮಾತಾಡುತ್ತಾ ಆಟವಾಡುತ್ತಿದ್ದರು. ಆದರೆ ಮನೆಯ ಮುಂದೆ ಬಟ್ಟೆ ಒಣ ಹಾಕಲೆಂದು ಹೋದಾಗ ವಿದ್ಯುತ್​ ಪ್ರವಹಿಸಿ ತಾಯಿ ಮತ್ತು ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಮನೆ ಆವರಣದಲ್ಲೇ ಮೂವರ ಮೃತದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಕುಟುಂಬಸ್ಥರ ಆಕ್ರಂದ ಮುಗಿಲು ‌ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!