ವಿಟ್ಲ: ಮೃತ ಬಾಲಕಿ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ:
ಬಿಜೆಪಿ ಕ್ಷೇಮನಿಧಿಯಿಂದ ನೂತನ ಮನೆ ನಿರ್ಮಾಣ ಭರವಸೆ
ವಿಟ್ಲ: ಕನ್ಯಾನದಲ್ಲಿ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು.
ಪ್ರಕರಣದ ತನಿಖೆಯನ್ನು ಪೋಲಿಸ್ ಇಲಾಖೆ ನಡೆಸುತ್ತಿದ್ದು ತಪ್ಪಿತಸ್ಥನಿಗೆ ಈ ನೆಲದ ಕಾನೂನಿನಡಿಯಲ್ಲೇ ಶಿಕ್ಷೆಯಾಗಲಿದ್ದು.ಮೃತಗೊಂಡವಳ ಪೋಷಕರಿಗೆ ಬಂಟ್ವಾಳ ಬಿಜೆಪಿ ಕ್ಷೇಮನಿಧಿಯಿಂದ ನೂತನ ಮನೆ ನಿರ್ಮಿಸುವುದಾಗಿ ಸ್ಥಳದಲ್ಲಿಯೇ ಮಾನ್ಯ ಶಾಸಕರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಮಂಡಲದ ಪದಾಧಿಕಾರಿಗಳು,ಸಂಘ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.




